ನಿಪ್ಪಾಣಿ: ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ, ಪ್ರಯತ್ನವಿಲ್ಲದೆ ಈ ಜೀವನ ಶೂನ್ಯ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿಇ ಪರೀಕ್ಷೆಗಳಲ್ಲಿ ಟಾಪ್ ನೂರರಲ್ಲಿ ಸ್ಥಾನ ಗಳಿಸಿದ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ 19 ವಿದ್ಯಾರ್ಥಿಗಳಿಗೆ ಹಾಗೂ ಖ್ಯಾತ ಕಂಪನಿಗಳಲ್ಲಿ ಉದ್ಯೋಗವಕಾಶ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳಿಗೆ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಅಚಿವರ್ಸ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಎಂಬಿಎ ಮತ್ತು ಎಂಸಿಎ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.
ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಕಾರಿ ಅಭಿಯಂತ ಸುನೀಲಕುಮಾರ ಬಳ್ಳೋಳ ಮಾತನಾಡಿ, ಜ್ಞಾನ, ಪಾಲಕರು ತಮ್ಮ ಮಕ್ಕಳನ್ನು ಕೇವಲ ಅಂಕ ಗಳಿಸುವ ಕುರಿತು ಹೇಳಿಕೊಳ್ಳದೆ ಎಂತಹ ಪರಿಸ್ಥಿತಿಯನ್ನೂ ಧೈರ್ಯದಿಂದ ಎದುರಿಸುವುದನ್ನು ಹೇಳಿಕೊಡಬೇಕು ಎಂದರು.
ಚಿಕ್ಕೋಡಿಯ ಪಂಖ್ ಇಂಡಿಯಾ ಫೌಂಡೇಷನ್‌ನ ಸಂಸ್ಥಾಪಕಿ ಗೌರಿ ಮಾಂಜರೇಕರ ಮಾತನಾಡಿ, ಪಾಲಕರೊಂದಿಗೆ ಸನ್ಮಾನ ಇದು ವಿದ್ಯಾರ್ಥಿಗಳ ಜೀವನದಲ್ಲಿಯ ದೊಡ್ಡ ಯಶಸ್ಸು. ತಾಂತ್ರಿಕ ಅಭ್ಯರ್ಥಿಗಳು ಪ್ರಾಯೋಗಿಕತೆಯ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಎಂದರು.
ಮಂಡಳದ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿದರು. ಸಿಇಒ ಡಾ. ಸಿದ್ಧಗೌಡ ಪಾಟೀಲ, ಬಿಇ ಪ್ರಾಚಾರ್ಯ ಡಾ. ಉಮೇಶ ಪಾಟೀಲ, ಸಾಕ್ಷಿ ಹಡಲಗೆ, ಆಫ್ರೀನ್ ನದಾಫ್, ಸಾರ್ಥಕ ಮೆಂಡಗುದಲೆ, ಮಂಡಳದ ಸಂಚಾಲಕ ಸಂಜಯ ಮೊಳವಾಡೆ, ಸಮೀರ ಬಾಗೇವಾಡಿ, ಪ್ರವೀನ ಪಾಟೀಲ, ಡಿಪ್ಲೋಮಾ ಪ್ರಾಚಾರ್ಯ ಬಸವರಾಜ ಕರೋಶಿ, ಪ್ರೊ. ಕವಿತಾ ವಸೇದಾರ ಇತರರು ಇದ್ದರು. ಡಾ. ಮುತಾಲಿಕ ದೇಸಾಯಿ ಮತ್ತು ಪ್ರೊ. ಸಂತೋಷ ಕೋಳಕಿ ಪರಿಚಯಿಸಿದರು. ಎಐಎಂಎಲ್ ಮುಖ್ಯಸ್ಥ ಪ್ರೊ. ಅನುಪ ಗಂಜಿ ಸ್ವಾಗತಿಸಿದರು. ಟಿಪಿಒ ಪ್ರೊ.ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು. ಪ್ರೊ. ಪ್ರಶಾಂತ ಶೇಡಬಾಳಕರ ವಂದಿಸಿದರು.