ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದಲ್ಲಿ ಗುರುವಾರ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಲಾಯಿತು. ವಿದ್ಯಾವತಿ ಭಜಂತ್ರಿ, ಪ್ರೊ.ಎಂ.ಜಿ. ಹೆಗಡೆ, ಡಾ.ಎಚ್​.ಬಿ.ಕೊಲಕಾರ, ರಾಜು ಮಠಮತಿ, ಸ್ಟಿಫನ್​ ಜೇಮ್ಸ್​ ಇತರರಿದ್ದರು. 
ಜಿಲ್ಲೆ

ತಮ್ಮೊಳಗಿನ ಕಲೆ ಗುರುತಿಸಬೇಕಿದೆ: ವಿದ್ಯಾವತಿ ಭಜಂತ್ರಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಜೀವನವೇ ಒಂದು ಕಲೆಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಕಲೆ ಹೊಂದಿರುತ್ತಾರೆ. ಅದನ್ನು ಗುರುತಿಸಬೇಕೆಂದು ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹೇಳಿದರು.

ನಗರದ ಕರ್ನಾಟಕ ನಾಟಕ ಅಕಾಡಮಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ, ನಾಟಕಕಾರ ಥಿಯೊಡರಸ್​ ಟಜೋರ್ಪೌಲಸ್​ ಬರೆದ ಈ ವರ್ಷದ ವಿಶ್ವ ರಂಗಭೂಮಿ ಸಂದೇಶವನ್ನು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬಾ ಸಾಹೇಬ್​ ಕಾಂಬಳೆ ಓದಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ಪಾರಿಜಾತ ಕಲಾವಿದ ಗೋಕಾನ ಈಶ್ವರ ಚಂದ್ರ ಬೆಟಗೇರಿ ಪಾರಿಜಾತದ ಪ್ರಾತ್ಯಕೆ ಪ್ರದರ್ಶಿಸಿದರು. ಬೆಳಗಾವಿಯ ಆರ್​.ಪಿ.ಡಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್​.ಬಿ.ಕೊಲಕಾರ ಮಾತನಾಡಿ, ಕಲೆಯ ಉಗಮ, ರಂಗಭೂಮಿ ಸುದೀರ್ ಇತಿಹಾಸ ಮತ್ತು ಆಧುನಿಕ ಯುಗದಲ್ಲಿ ಕನ್ನಡ ರಂಗಭೂಮಿಯ ನಿಲುವಿನ ಬಗ್ಗೆ ಮಾಹಿತಿ ನೀಡಿದರು.

ದುಳಗಣವಾಡಿ ರಂಗದರ್ಶನ ಕಲಾತಂಡ ಬೀದಿ ನಾಟಕ ಪ್ರದರ್ಶಿಸಿತು. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಯುವರಂಗ ತಂಡದ ಕಲಾವಿದರು ರಂಗ ಗೀತೆ ಹಾಡಿದರು. ರಂಗ ಸಂಪದ ಹಿರಿಯ ರಂಗ ಸಂಟಕ ರಾಮಚಂದ್ರ ಕಟ್ಟಿ, ಹಿರಿಯ ರಂಗ ಕಲಾವಿದ ರಮೇಶ ಅನಿಗಳ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ರಂಗಕರ್ಮಿ ರಾಜು ಮಠಮತಿ, ಸ್ಟಿಫನ್​ ಜೇಮ್ಸ್​ ಇದ್ದರು. ಶ್ವೇತಾ ಬಿ.ಕೆ., ಚೇತನ ಕುಲಕರ್ಣಿ ನಿರೂಪಿಸಿದರು.