ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡಲಾಗುತ್ತಿದ್ದ ಸಹಾಯಧನ ಕಡಿತ ಮಾಡಿರುವುದನ್ನು ಖಂಡಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ಟಿಯುಸಿಐನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಆರ್.ಹುಚ್ಚರೆಡ್ಡಿ, ಅಜೀಜ್ ಜಾಗೀರದಾರ್, ಸೈಯದ್ ಅಬ್ಬಾಸ್ ಅಲಿ, ನಿರಂಜನ್, ಶಿವಯ್ಯ ಇದ್ದರು. 
ಜಿಲ್ಲೆ

ಶೈಕ್ಷಣಿಕ ಸಹಾಯಧನ ಕಡಿತ ನಿರ್ಧಾರ ಹಿಂಪಡೆಯಿರಿ

ರಾಚಯ್ಯ ಸ್ವಾಮಿ

ರಾಯಚೂರು: ಕಲಿಕಾ ಭಾಗ್ಯ ಯೋಜನೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಟಿಯುಸಿಐನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ವೇಣುಗೋಪಾಲಗೆ ಮನವಿ ಸಲ್ಲಿಸಿ, ಆಯಾ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಅನುಗುಣವಾಗಿ ಸಹಾಯಧವನ್ನು ನೀಡಲಾಗುತ್ತಿತ್ತು. ಆದರೆ ಅ.30ರಂದು ಆದೇಶ ಹೊರಡಿಸಿ ಸಹಾಯಧನದಲ್ಲಿ ಕಡಿತ ಮಾಡಲಾಗಿದೆ ಎಂದು ದೂರಿದರು.
ಸಹಾಯಧನ ಕಡಿತದಿಂದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿ ತೊಂದರೆಯಾಗಲಿದೆ. ಕಾರ್ಮಿಕ ಇಲಾಖೆಗೆ ಸಂಗ್ರಹವಾಗುವ ಸೆಸ್ ಹಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರಸ್ತುತ 10 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತ ಇಲಾಖೆಗೆ ಜಮಾ ಆಗುತ್ತಿದೆ.
ನೋಂದಾಯಿತಿ ಕಟ್ಟಡ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ನೀಡಿದರೂ ಸಂಗ್ರಹವಾದ ಸೆಸ್‌ನಲ್ಲಿ 6,700 ಕೋಟಿ ರೂ.ಗೂ ಹೆಚ್ಚಿನ ಹಣ ಉಳಿಯಲಿದೆ. ಆದರೂ ಶೈಕ್ಷಣಿಕ ಸಹಾಯಧನ ಕಡಿಮೆ ಮಾಡಲಾಗಿದೆ. ಕೂಡಲೇ ಸರ್ಕಾರ ಆದೇಶ ಹಿಂಪಡೆದು ಹಿಂದಿನಂತೆ ಸಹಾಯಧನ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಆರ್.ಹುಚ್ಚರೆಡ್ಡಿ, ಅಜೀಜ್ ಜಾಗೀರದಾರ್, ಸೈಯದ್ ಅಬ್ಬಾಸ್ ಅಲಿ, ನಿರಂಜನ್, ಶಿವಯ್ಯ, ಲಕ್ಷ್ಮಣ, ಆನಂದ, ನಬೀಸಾಬ್ ಪಾಲ್ಗೊಂಡಿದ್ದರು.