ಕಾಗವಾಡ: ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದರೂ ಸರ್ಕಾರೇತರ ಸಂಸ್ಥೆಗಳ ಮತ್ತು ದಾನಿಗಳ ಸಹಕಾರವಿಲ್ಲದೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಸಾಕಷ್ಟು ದಾನಿಗಳ ಉದಾರತೆಯಿಂದಾಗಿ ಶಿಕ್ಷಣ ಸಂಸ್ಥೆಗಳು ಬೆಳೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿ ಸಂಸ್ಥೆಯಲ್ಲಿ ಶುಕ್ರವಾರ 25 ಕಂಪ್ಯೂಟರ್ ಕೇಂದ್ರ ಉದ್ಘಾಟನೆ, ವಿದ್ಯಾರ್ಥಿಗಳಿಗೆ ದಾನಿಗಳಿಂದ ನೀಡಿರುವ ಶಾಲಾ ಬ್ಯಾಗ್ ವಿತರಣೆ, ದಾನಿಗಳ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣ ಪ್ರೇಮಿ ಕೈಲಾಶ ಪುರಮವಾರ ಬಂಧುಗಳು 550 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ನೀಡಿದರು. ಉದ್ಯಮಿ ಶಾಂತಿನಾಥ ಪಾಲಗೌಡರ, ಮಹಾವೀರ ಪಾಲಗೌಡರ, ಕೈಲಾಶ ಪರಮವಾರ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕಾಗಿ 10 ಲಕ್ಷ ರೂ. ಹಾಗೂ ಶಾಸಕ ರಾಜು ಕಾಗೆ ಅವರು ಪುತ್ರಿ ಕತಿಕಾ ಪಾಟೀಲ ಸ್ಮರಣಾರ್ಥ 2 ಲಕ್ಷ ರೂ. ದಾನ ನೀಡಿದ್ದಕ್ಕೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕೀರ್ತಿ ಪುರಮವಾರ, ಸಂಗೀತಾ ಪಾಲಗೌಡರ, ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜಿತ್ ನಾಂದ್ರೆ, ಸದಸ್ಯರಾದ ಡಾ. ಅಶೋಕ ಪಾಟೀಲ, ಆರ್.ವಿ. ಸಂಗೋರಾಮ, ರಾಹುಲ ಸವದಿ, ರಾಜು ಘೇನಪ್ಪಗೋಳ, ಯಶವಂತ ಚಾವರೆ, ಎಂ.ಎಸ್. ಪಾಟೀಲ, ಅಣ್ಣಾಸಾಹೇಬ ಹಂಡಗೆ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ಮುಖ್ಯಶಿಕ್ಷಕರಾದ ಎಂ.ಎಸ್. ಕಾಳೇನಟ್ಟಿ, ಬಾಹುಬಲಿ ಬನಜವಾಡ, ಎಂ.ಕೆ. ಕಾಂಬಳೆ, ಎ.ಕೆ. ಪಾಟೀಲ, ಸತೀಶ ಪಾಟೀಲ ಇತರರಿದ್ದರು.