ಜಿಲ್ಲೆ

ಸರ್ವರ ಸಹಕಾರದಿಂದ ಕಾರ್ಯನಿರ್ವಹಣೆ

ಸೋಮಲಿಂಗ ತಳವಾರ

ಕಟಕೋಳ: ಬಿಜಗುಪ್ಪಿ ಸಹಕಾರಿ ಸಂದ ಅಭಿವೃದ್ಧಿಗಾಗಿ ಹಾಗೂ ರೆತರ ಹಿತದೃಷ್ಟಿಯಿಂದ 3.75 ಕೋಟಿ ರೂ. ಮಂಜೂರಾಗಿದ್ದು, 3.18 ಕೋಟಿ ರೂ.ಗೂ ಅಧಿಕ ಹಣ ರೆತರಿಗೆ ವಿತರಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್​ ಅಧ್ಯ ಅಪ್ಪಾಸಾಹೇಬ ಕುಲಗುಡೆ ಹೇಳಿದರು.

ಸಮೀಪದ ಬಿಜಗುಪ್ಪಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ ಬಹುಉದ್ದೇಶಿತ ಸೇವಾ ಕೇಂದ್ರ ನಬಾರ್ಡ್​ ಯೋಜನೆಯಡಿಯಲ್ಲಿ ನಿರ್ಮಿಸಲಾದ ಸಂದ ಗೋದಾಮು ಬುಧವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸಹಕಾರಿಯ ಎಲ್ಲ ಮುಖಂಡರು ಸೇರಿ ನನಗೆ ಅಧ್ಯ ಸ್ಥಾನ ನೀಡಿದ್ದಾರೆ. ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು.

ಸಂದ ಅಧ್ಯ ಮಾರುತಿ ಕೊಪ್ಪದ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಶ್ರೀಕಾಂತ ಢವಣ ಮಾತನಾಡಿದರು.

ಹರ್ಲಾಪುರ&ಢವಳೇಶ್ವರ ಮಠದ ರೇಣುಕ ಶಿವಯೋಗಿ ಸ್ವಾಮೀಜಿ, ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ತೊಂಡಿಕಟ್ಟಿ ಗ್ರಾಪಂ ಅಧ್ಯೆ ಚೆತ್ರಾ ಅತ್ತಾಲಟ್ಟಿ, ಬಿಡಿಸಿಸಿ ಬ್ಯಾಂಕ್​ ಉಪಪ್ರಧಾನ ವ್ಯವ್ಯಸ್ಥಾಪಕ ನಿಸಾರ್​ ಅಹ್ಮದ್​ ಕಲಾವಂತ ಹಾಗೂ ಸಂದ ಉಪಾಧ್ಯ, ನಿರ್ದೇಶಕರು ಸದಸ್ಯರು ಇದ್ದರು.