ಇಟಗಿ: ಜೀವನದಲ್ಲಿ ಗುರುವಿನ ಆಶೀರ್ವಾದ ಇದ್ದರೆ ಉನ್ನತ ಸ್ಥಾನ ತಲುಪಲು ಸಾಧ್ಯ ಎಂದು ನಿವತ್ತ ಪ್ರಾಚಾರ್ಯ ವಿ.ವಿ. ಬಡಿಗೇರ ಹೇಳಿದರು.
ಗ್ರಾಮದ ಜನತಾ ಶಿಣ ಪ್ರಸಾರ ಸಮಿತಿಯ ಚನ್ನಮ್ಮ ರಾಣಿ ಸ್ಮಾರಕ ಪ್ರೌಢ ಶಾಲೆಯಲ್ಲಿ 1990&91 ನೇ ಸಾಲಿನ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರ ಕಲಿಸಿದ ಗುರುಗಳು ಜನ್ಮಕೊಟ್ಟ ತಂದೆ&ತಾಯಿ ಮತ್ತು ಭೂಮಿ ತಾಯಿ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯ ಮಾಡಲು ಅಣಿಯಾಗಬೇಕು ಎಂದರು.
ಅಧ್ಯತೆವಹಿಸಿ ಮಾತನಾಡಿದ ಸಂಸ್ಥೆಯ ಚೇರ್ಮನ್ ವಿಜಯಕುಮಾರ ಸಾಣಿಕೊಪ್ಪ, ಕಲಿಸಿದ ಗುರುಗಳ ಸೇವೆ ಗೌರವಿಸಿ ವಂದಿಸುವ ಕಾರ್ಯ ಮಾದರಿಯಾಗಿದ್ದು, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯ ಎಂದರು.
ಸಂಸ್ಥೆಯ ಉಪಾಧ್ಯ ಬಿ.ವಿ. ಬೆಣಚಿನಮರಡಿ, ಕಾರ್ಯದರ್ಶಿ ಶ್ರೀಶೆಲ ತುರಮರಿ, ನಿವತ್ತ ಪ್ರಾಚಾರ್ಯ ಸಿ.ಬಿ. ಲಂಗೋಟಿ, ನಿವತ್ತ ಶಿಕರಾದ ಕೆ.ಎಸ್. ಕುರಗುಂದ, ಬಿ.ಬಿ. ಕಾದ್ರೊಳ್ಳಿ, ಕೆ.ಬಿ. ನಾವಲಗಟ್ಟಿ, ಆರ್.ಎಂ. ಕುಂಕುರ, ಎಂ.ಎಸ್. ಪೂಜಾರ, ಸಿ.ಆರ್. ಪಾಟೀಲ, ಯು.ಡಿ. ಹಾರುಗೊಪ್ಪ, ಅದಶ ಬಳಗಪ್ಪನವರ, ಶಾಲೆಯ ಹಳೆಯ ವಿದ್ಯಾರ್ಥಿಗಳು ಇದ್ದರು.