ಪರಮಾನಂದವಾಡಿ ಗ್ರಾಮದ ಎಸ್.ಆರ್. ದಳವಾಯಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಎಸ್.ಡಿ.ಹನಗಂಡಿ, ವಿಜಯ ದಳವಾಯಿ, ಎನ್.ಬಿ.ಕುಸನಾಳೆ, ಇತರರಿದ್ದರು. 
ಜಿಲ್ಲೆ

ಪರಿಶ್ರಮದಿಂದ ಸಾಧನೆ ಸಾಧ್ಯ

ಪ್ರಶಾಂತ ಹೂಗಾರ

ಪರಮಾನಂದವಾಡಿ: ವಿದ್ಯಾರ್ಥಿಗಳಲ್ಲಿ ಓದಿನ ದಾಹ ಇರಬೇಕು. ನಿರಂತರ ಪರಿಶ್ರಮದಿಂದ ಓದಿದಾಗ ಮಾತ್ರ ಸಾಧನೆ ಸಾಧ್ಯ ಎಂದು ನಸಲಾಪುರ ಸಂಪನ್ಮೂಲ ವ್ಯಕ್ತಿ ಎಸ್.ಡಿ.ಹನಗಂಡಿ ಹೇಳಿದರು.

ಗ್ರಾಮದ ಶ್ರೀ ಹಾಲ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಆರ್. ದಳವಾಯಿ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯಮಟ್ಟದ ಕುಸ್ತಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಬಾಬುರಾವ ಮಾನೆ ಅವರನ್ನು ಸತ್ಕರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ವಿಜಯ ದಳವಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಎನ್.ಬಿ.ಕುಸನಾಳೆ, ಜೆ.ಪಿ.ಶಿರಗೂರಕರ, ಪ್ರಾಚಾರ್ಯ ರಾಜು ಕಾಂಬಳೆ, ಅಶೋಕ ಶಿರಹಟ್ಟಿ, ಎಸ್.ಎಸ್. ಚೌಗಲಾ, ಡಿ.ಎಂ.ದುರದುಂಡಿ, ಪಿ.ಎಸ್.ಹೊನವಾಡೆ, ಐ.ಪಿ.ಬಡಿಗೇರ, ಎಸ್.ಎ. ಮುಲ್ಲಾ, ಎಸ್.ಎಸ್. ಬಂಡಗಾರ, ಎಸ್.ಎಸ್.ಒಡೆಯರ, ಎಂ.ಆರ್.ಬಂತಿ ಇತರರಿದ್ದರು.