ಬೈಲಹೊಂಗಲ: ಸಂತ, ಮಹಾಂತ ಹಾಗೂ ಮಹಾತ್ಮರ ಅಮೃತವಾಣಿ ಆಲಿಸುವುದರಿಂದ ಸುಖ, ಶಾಂತಿ ಹಾಗೂ ಸಮೃದ್ಧಿ ಪ್ರಾಪ್ತಿ ಜತೆಗೆ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ ಎಂದು ಹೂಲಿಯ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ರಾಯಣ್ಣನ ಸಂಗೊಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರೇಮಠದ ಶ್ರೀಗುರು ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ, ಲಿಂ.ಸಿದ್ಧಲಿಂಗ ಶಿವಾಚಾರ್ಯರ 20ನೇ ಪುಣ್ಯಸ್ಮರಣೋತ್ಸವ ಹಾಗೂ ಜನಜಾಗೃತಿ ಧರ್ಮಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಅನೇಕ ಪವಾಡ ಪುರುಷರು ತಮ್ಮ ತಪ್ಪಸ್ಸಿನ ಲದಿಂದ ಜನ ಜಾಗೃತಿಯೊಂದಿಗೆ ಧರ್ಮದ ತಿರುಳನ್ನು ಸಾರಿದ್ದಾರೆ. ಅಂತಹ ಮಹಾತ್ಮರ ಸ್ಮರಣೆ ನಿರಂತರವಾಗಬೇಕು. ಜ್ಞಾನ ಹಾಗೂ ಸಂಸ್ಕಾರ ಪಡೆದು ಜೀವನ ಪಾವನವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುತ್ನಾಳದ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿ ಹಿರೇಮಠ ಜಾತ್ರೆ ಹಾಗೂ ಉತ್ಸವಗಳ
ಮೂಲಕ ಸದಾ ಧರ್ಮ ಜಾಗೃತಿ ಕಾರ್ಯಗಳಿಂದ ಮಾದರಿಯಾಗಿದೆ ಎಂದರು. ಸುತಗಟ್ಟಿಯ ಹಿರೇಮಠದ ಸಿದ್ಧಲಿಂಗ ದೇವರು, ಶರಣಮಟ್ಟಿಯ ಶಿವಶಕ್ತಿ ಮಠದ ರುದ್ರಯ್ಯ ದೇವರು, ಅವರಾದಿಯ ಉಳವಯ್ಯ ಹಿರೇಮಠ, ಧರ್ಮದರ್ಶಿ ಮಂಜಯ್ಯ ಹಿರೇಮಠ ಧಾರ್ಮಿಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸಿದರು. ವಿವಿಧ ವಾದ್ಯಮೇಳ ಹಾಗೂ ಸುಮಂಗಲೆಯರ ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಸಂಚರಿಸಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ಮಹಾಪ್ರಸಾದ ನಡೆಯಿತು.
ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾರ ಸ್ವಾಮೀಜಿ, ಹೊಸೂರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಏಣಗಿಯ ಬಂಗಾರಜ್ಜನಮಠದ ವಿರೂಪಾಯ್ಯ ಸ್ವಾಮೀಜಿ, ಡಾ.ಬಸವರಾಜ ಹಿರೇಮಠ, ಗ್ರಾಮದೇವಿ ಕಮಿಟಿ ಅಧ್ಯ ಬಸವರಾಜ ಕೊಡ್ಲಿ, ವೀರೇಶ ಹೊಳೆಪ್ಪನವರ, ನಿವೃತ್ತ ಶಿಕ ಸಿ.ಐ.ಹೊಸಮನಿ, ಪಿ.ವೈ.ಕುಂದೇಕರ, ರವೀಂದ್ರ ಕೂಂಕೂರ, ಚಂದ್ರಶೇಖರ ಹಿರೇಮಠ ಇತರರಿದ್ದರು. ಪ್ರೊ.ಚನ್ನಪ್ಪ ಹಕ್ಕಿ ಸ್ವಾಗತಿಸಿದರು. ಉದಯ ಹಿರೇಮಠ ನಿರೂಪಿಸಿದರು. ಪತ್ರಕರ್ತ ಮಹಾಂತೇಶ ರಾಜಗೋಳಿ ವಂದಿಸಿದರು.