ಕೂಡ್ಲಿಗಿ ಚಂದ್ರಶೇಖರ ಆಜಾದ್ ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ನಾಗರಿಕ ಹಿತ ರಕ್ಷಣಾ ವೇದಿಕೆ ಗಣೇಶ ಮೂರ್ತಿ ಮೆರವಣಿಗೆ ನಡೆಯಿತು. ನಾಕರಿಕ ಹಿತಾರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಗೌರವ ಅಧ್ಯಕ್ಷ ಸುರೇಶ್ ಎಸ್.ಜನ್ನು, ಎಚ್.ವೀರಭದ್ರಪ್ಪ, ಸಿ.ಬಿ. ಸಿದ್ದೇಶ, ಟಿ.ಜಿ.ಮಲ್ಲಿಕಾರ್ಜುನಗೌಡ, ಮಂಜುನಾಥ ಜನ್ನು, ಎಚ್.ರಾಜಶೇಖರ, ಉದಯ ಜನ್ನು, ಸೈಯದ್ ಶುಕೂರು, ಡಿಶ್ ಶ್ರೀನಿವಾಸ್, ಕುಮಾರಸ್ವಾಮಿ, ಶಫಿವುಲ್ಲಾ ಇತರರಿದ್ದರು. 
ಜಿಲ್ಲೆ

ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ

ರುದ್ರಪ್ಪ ವಾಲಿ

ಕೂಡ್ಲಿಗಿ: ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ಭಾನುವಾರ ರಾತ್ರಿ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ದೀಪಾಲಂಕಾರ ಮಾಡಿದ್ದ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು. ಚಂಡೆ ವಾದನ, ಸಮಾಳ, ಬ್ಯಾಂಡ್ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ತುಂತುರು ಮಳೆಯಲ್ಲೇ ಮೆರವಣಿಗೆ ನಡೆಯಿತು. ಉಡುಪಿಯ ಚಂಡೆ ವಾದನ ನೋಡುಗರನ್ನು ಸೆಳೆಯುವುದರ ಜತೆಗೆ ಯುವಕರನ್ನು ಕುಣಿಯುವಂತೆ ಮಾಡಿತು.

ಪ್ರಮುಖರಾದ ಎಸ್.ವೆಂಕಟೇಶ, ಬಿ.ಮಂಜುನಾಥ, ಸಿ.ಬಿ.ಜಯರಾಂ, ಡಾಣಿ ರಾಘವೇಂದ್ರ, ಪೀರಣ್ಣ, ಗಂಗಾಧರ, ಶಾಮಿಯಾನ ಚಂದ್ರು, ಹನಸಿ ಪ್ರಕಾಶ, ಕ್ಯಾರಿ ರಮೇಶ, ಬಣಕಾರ ಬಸವರಾಜ, ಕಾವಲ್ಲಿ ವೆಂಕಟೇಶ, ರೆಹಮಾನ್, ಖಾಸಿಂ ಸಾಬ್, ಜಿಲಾನ್ ಇತರರಿದ್ದರು.