ಕಂಪ್ಲಿ ಕೋಟೆಯಲ್ಲಿ ಆಯೋಜಿಸಿದ್ದ ಶ್ರೀಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ನಿಮಿತ್ತ ಪಲ್ಲಕ್ಕಿ ಸೇವೆ ನಡೆಯಿತು. ಅರ್ಚಕರಾದ ಕಿಶೋರ್‌ಚಾರ್, ಶ್ರೀನಿವಾಸಾಚಾರ್, ರಾಘವೇಂದ್ರಚಾರ್ ಗುಡಿ ಇತರರಿದ್ದರು. 
ಜಿಲ್ಲೆ

ಶ್ರದ್ಧೆಭಕ್ತಿಗಳಿಂದ ಶ್ರೀಜಯತೀರ್ಥರ ಮಧ್ಯಾರಾಧನೆ

ರುದ್ರಪ್ಪ ವಾಲಿ

ಕಂಪ್ಲಿ: ಇಲ್ಲಿನ ಕೊಟೆಯ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀರಾಯರ ಮಠದಲ್ಲಿ ಶ್ರೀಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ಮಂಗಳವಾರ ಶ್ರದ್ಧೆಭಕ್ತಿಗಳಿಂದ ಜರುಗಿತು.

ಬೆಳಗ್ಗೆ 6ಗಂಟೆಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಭಜನೆ, ಪಲ್ಲಕ್ಕಿ ಉತ್ಸವ, ನೈವೇದ್ಯ, ಹಸ್ತೋದಕ, ತೀರ್ಥ ಪ್ರಸಾದ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಯರ ಬೃಂದಾವನವನ್ನು ಹೂಗಳಿಂದ ಅಲಂಕರಿಸಲಾಗಿತ್ತು.

ಕಂಪ್ಲಿ ಶ್ರೀಗುರುರಾಘವೇಂದ್ರ ಸಾರ್ವಭೌಮರ ಮಠದ ಅರ್ಚಕ ಕಿಶೋರ್‌ಚಾರ್, ಶ್ರೀ ಅಮೃತ ಶಿಲಾರಾಮಚಂದ್ರದೇವರ ಅರ್ಚಕ ಶ್ರೀನಿವಾಸಾಚಾರ್, ರಾಘವೇಂದ್ರಚಾರ್ ಗುಡಿ ಪೌರೋಹಿತ್ಯದಲ್ಲಿ ಮಧ್ಯಾರಾಧನೆ ಕಾರ್ಯಕ್ರಮಗಳು ನಡೆದವು.