ಮುನವಳ್ಳಿ: ಉದಾತ್ತ ಚಿಂತನೆ, ನಿರಂತರ ಅಧ್ಯಯನ ಹಾಗೂ ಸದೃಢ ಆತ್ಮವಿಶ್ವಾಸ ಮೈಗೂಡಿಸಿಕೊಂಡು ಮುನ್ನುಗ್ಗಿದಾಗ ಮಾತ್ರ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಸುಕ್ಷೇತ್ರ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಖಂಡ ಸದಾಶಿವ ಕೌಜಲಗಿ ಮಾತನಾಡಿ, ಶಿಕ್ಷಣ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲೂ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮಠ-ಮಾನ್ಯಗಳ, ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ಮುಖಂಡ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಸಂಸ್ಥೆಗೆ 1 ಲಕ್ಷ ರೂ. ದೇಣಿಗೆ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಒಟ್ಟು 1 ಲಕ್ಷ ರೂ. ಬಹುಮಾನ ನೀಡುವುದಾಗಿ ಭರವಸೆ ನೀಡಿದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮುರುಘೇಂದ್ರ ಸ್ವಾಮೀಜಿ, ಬಿಇಒ ಮೋಹನ ದಂಡಿನ, ಸಂಸ್ಥೆ ಉಪಾಧ್ಯಕ್ಷ ಅರುಣಗೌಡ ಪಾಟೀಲ, ನಿರ್ದೇಶಕರಾದ ಗಂಗಾಧರ ಗೊರಾಬಾಳ, ಈರಣ್ಣ ಸಂಕಣ್ಣವರ, ಶಂಕರ ಗಯ್ಯಳಿ, ಮಲ್ಲಿಕಾರ್ಜುನ ಜಮಖಂಡಿ, ಪ್ರಾಚಾರ್ಯ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಎಂ.ಗಿರೀಶ, ಎಂ.ಸಿ.ಬಾಂಡೇಕರ, ಶೇಖರ ಮುಪ್ಪಿನವರಮಠ, ಜಿ.ಜಿ.ಲಮಾಣಿ, ರವಿ ಪೂಜಾರ, ಅಶೋಕ ಸಂಕನ್ನವರ, ದಾನಯ್ಯ ಗದಗಿನ, ಎನ್.ಎಸ್.ಕಬ್ಬೂರ, ನಾಗರಾಜ ಕಮ್ಮಾರ, ಪರುಶುಮರಾಮ ಕದಂ ಇತರರಿದ್ದರು.