ಮಾಂಜರಿ ಸಮೀಪದ ತೋರಣಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟಿಸಲಾಯಿತು. ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ, ರಾಮಗೌಡ ಸಣ್ಣಲಚ್ಚಪ್ಪಗೋಳ, ಭೀಮಾ ಸಣ್ಣಲಚ್ಚಪ್ಪಗೋಳ ಇತರರಿದ್ದರು. 
ಜಿಲ್ಲೆ

ಶುದ್ಧ ನೀರಿನಿಂದ ಆರೋಗ್ಯ ಸಂರಕ್ಷಣೆ

ರಾಘವೇಂದ್ರಗೌಡ ಭೀ ಪಾಟೀಲ್

ಮಾಂಜರಿ: ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಶುದ್ಧ ಕುಡಿಯುವ ನೀರು ಒದಗಿಸುವುದು ಪುಣ್ಯದ ಕೆಲಸ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಚಿಕ್ಕೋಡಿ ತಾಲೂಕಿನ ತೋರಣಹಳ್ಳಿಯ ಹನುಮಾನ ದೇವಸ್ಥಾನ ಬಳಿ ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಕೆಎಲ್ಇ ಶಿಕ್ಷಣ ಸಂಸ್ಥೆ ನಿರ್ದೇಶಕ ಅಮಿತ ಕೋರೆ ಅವರ ಜನಶಕ್ತಿ ಫೌಂಡೇಷನ್ ವತಿಯಿಂದ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಹಲವಾರು ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ. ಹೀಗಾಗಿ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಾರೆ. ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಮಿತ ಕೋರೆ ಮುಂದಾಳತ್ವದಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ. ನೀರು ಸದುಪಯೋಗಪಡಿಸಿಕೊಂಡು ಜನರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಚಿದಾನಂದ ಬಸಪ್ರಭು ಕೋರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ದೇವಸ್ಥಾನ ಟ್ರಸ್ಟ್‌ನ ರಾಮಗೌಡ ಸಣ್ಣಲಚ್ಚಪ್ಪಗೋಳ, ಭೀಮಾ ಸಣ್ಣಲಚ್ಚಪ್ಪಗೋಳ, ಅಶೋಕ ಖಾಡೆ, ಬಸವರಾಜ ಮಾಳಗೆ, ವಿಠ್ಠಲ ಜೋಗೆ, ಪುಂಡಲೀಕ ದೊಡ್ಡಲಚ್ಚಪ್ಪಗೋಳ, ಕೆಂಪಣ್ಣ ಪಾಟೀಲ, ಪಾಂಡುರಂಗ ಸಣ್ಣಲಚ್ಚಪ್ಪಗೋಳ, ಶಂಕರ ಬುನ್ನಟ್ಟಿ, ಅಣ್ಣಾಸಾಹೇಬ ಜೋಗೆ, ಶೀತಲ ಮುಂಡೆ ಇತರರಿದ್ದರು.