ಜಿಲ್ಲೆ

ದಾನದಿಂದ ನೆಮ್ಮದಿ ಸಾಧ್ಯ

ಪ್ರಶಾಂತ ಹೂಗಾರ

ಅರಟಾಳ: ಪಂಢರಿನಾಥನ ಕೃಪೆಗೆ ಪಾತ್ರರಾದರೆ ಜೀವನ ಮುಕ್ತಿ ಜತೆಗೆ ಗುರುನಾಥನ ದರ್ಶನವಾಗುತ್ತದೆ ಎಂದು ಸಂತ ಪಂಢರಪುರದ ಕಾಕಾ ಮಹಾರಾಜರು ಹೇಳಿದರು.

ಗ್ರಾಮದ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಸಂತ ಮಂಡಳಿಯವರು ಂಡರಪುರದ 12ನೇ ವರ್ಷದ ಪಾದಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ನಿತ್ಯ ದೇವರ ಧ್ಯಾನ, ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ. ದಾನ, ಧರ್ಮ ಮಾಡುವುದರಿಂದ ಸಂತೋಷ, ನೆಮ್ಮದಿ ಸಿಗುತ್ತದೆ ಎಂದರು.

ರಮೇಶ ಝಂಜರವಾಡ, ಪ್ರಭು ಸುಟ್ಟಟ್ಟಿ, ಹೂವಣ್ಣ ಹಿರೇಕುರಬರ, ಬಸಪ್ಪ ಪಾಟೀಲ, ರಂಗಪ್ಪ ಗಿರಗಾಂವಿ, ಯಂಕಪ್ಪ ಹಿರೇಕುರಬರ, ಸುರೇಶ ಕಾಂಬಳೆ, ತಿಪ್ಪಣ್ಣ ಹಟ್ಟಿ, ಪೀರಪ್ಪ ಕೊಕಟನೂರ, ಮಾಳಪ್ಪ ಅರ್ಜುನಗಿ, ಅಶೋಕ ಪೂಜಾರಿ, ಬಸಪ್ಪ ಪಾಟೀಲ, ರಮೇಶ ಗೊರವ, ಮಹಾದೇವ ಹಟ್ಟಿ ಇತರರು ಇದ್ದರು.