ಸರ್ಕಾರಿ, ಮಿಲಿಟರಿ ಗೌರವದೊಂದಿಗೆ ಯೋಧನ ಅಂತಿಮ ಸಂಸ್ಕಾರ ನಡೆಯಿತು. 
ಜಿಲ್ಲೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತಿಮ ಸಂಸ್ಕಾರ

ಬೈಲಹೊಂಗಲ: ಮಹಾರಾಷ್ಟ್ರದ ಪುಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಸೋಮನಟ್ಟಿ ಗ್ರಾಮದ ಯೋಧ ಚನ್ನಬಸಪ್ಪ ಮುಳ್ಳಗಸಿ (39) ಶನಿವಾರ ಹದಯಘಾತದಿಂದ ಪುಣೆಯಲ್ಲಿ ಶನಿವಾರ ನಿಧನರಾಗಿದ್ದರು. ಭಾನುವಾರ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ತಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರಾಜಕೀಯ ಮುಖಂಡರು, ಯುವಕರು, ಗ್ರಾಮಸ್ಥರು ಅಗಲಿದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮೃತ ಯೋಧ ಚನ್ನಬಸಪ್ಪ ಮುಳ್ಳಗಸಿ ಅವರು 21 ವರ್ಷಗಳಿಂದ ದೇಶ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು.