ರಾಯಚೂರು ತಾಲೂಕಿನ ಗಧಾರ ಗ್ರಾಮದ ನಾಗೇಂದ್ರಪ್ಪ ಎನ್ನುವವರ ಹೊಲದಲ್ಲಿ ಸೋಮವಾರ ಅನಾಮಧೇಯ ವ್ಯಕ್ತಿಗಳು ವಾಮಾಚಾರ ನಡೆಸಿರುವುದು. 
ಜಿಲ್ಲೆ

ಕಿಡಿಕೇಡಿಗಳಿಂದ ಹೊಲದಲ್ಲಿ ವಾಮಾಚಾರ

ರಾಚಯ್ಯ ಸ್ವಾಮಿ

ರಾಯಚೂರು: ತಾಲೂಕಿನ ಗಧಾರ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಗಳು ರೈತರೊಬ್ಬರ ಹೊಲದಲ್ಲಿ ಸೋಮವಾರ ವಾಮಾಚಾರ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ಹೋಗಲು ಭಯಭೀತರಾಗುವಂತಾಗಿದೆ.
ಗ್ರಾಮಕ್ಕೆ ಹತ್ತಿರದಲ್ಲಿರುವ ನಾಗೇಂದ್ರಪ್ಪ ಎನ್ನುವವರ ಹೊಲದಲ್ಲಿ ವಾಮಾಚಾರ ನಡೆಸಲಾಗಿದ್ದು, ಸ್ಥಳದಲ್ಲಿ ನಿಂಬೆಹಣ್ಣು, ತೆಂಗಿನಕಾಯಿ, ಅಕ್ಕಿ, ಬೆಳೆ, ಉಪ್ಪು, ಅರಿಶಿಭ, ಕುಂಕುಮ ಹಾಕಿ ಪೂಜೆ ನಡೆಸಲಾಗಿದೆ. ಜತೆಗೆ ಹೊಲದ ಮಧ್ಯದಲ್ಲಿನ ಹತ್ತಿ ಗಿಡಗಳನ್ನು ಕಿತ್ತು ಹಾಕಲಾಗಿದೆ.
ಯಾವ ಕಾರಣಕ್ಕಾಗಿ ವಾಮಾಚಾರ ನಡೆಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇದರಿಂದಾಗಿ ನಾಗೇಂದ್ರಪ್ಪ ಮತ್ತು ಕುಟುಂಬಸ್ಥರು ಸೇರಿದಂತೆ ಅಕ್ಕಪಕ್ಕದ ಹೊಲದ ರೈತರು ಕೂಡಾ ತಮ್ಮ ಹೊಲಕ್ಕೆ ಹೋಗಲು ಆತಂಕ ಪಡುವ ಸ್ಥಿತಿ ಎದುರಾಗಿದೆ.