ಕಾನಹೊಸಹಳ್ಳಿ: ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದೇ ಮಾನವನ ಗುಣವಾಗಬೇಕು ಎಂದು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಜುಮ್ಮೋಬನಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಕರಗಲ್ಲು ಪ್ರತಿಷ್ಠಾಪನೆ ಹಾಗೂ ಮಲ್ಲಿಯಮ್ಮ ದೇವಿಯ ನೂತನ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಯಾವುದೇ ಫಲಾಪೇಕ್ಷೆಯಿಲ್ಲದೇ ಕಷ್ಟದಲ್ಲಿರುವವರಿಗೆ ನೆರವಾದರೆ ಪುಣ್ಯ ಪ್ರಾಪ್ತಿಯಾಗಲಿದೆ. ಮನುಷ್ಯ ಎಷ್ಟೇ ವಿದ್ಯಾವಂತ-ಶ್ರೀಮಂತನಾದರೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳದ ಹೊರತು ಪರಿಪೂರ್ಣ ವ್ಯಕ್ತಿಯಾಗಲಾರ, ಈ ನಿಟ್ಟಿನಲ್ಲಿ ಸತ್ಕಾರ್ಯ ಮಾಡುವ ಮೂಲಕ ಪರೋಪಕಾರಿ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.
ಗ್ರಾಮದ ಮುಖಂಡರಾದ ಜಿ.ಓಬಣ್ಣ, ವೀರಭದ್ರಪ್ಪ, ವಿ.ಮಲ್ಲಿಕಾರ್ಜುನಪ್ಪ, ಸಣ್ಣ ಓಬಯ್ಯ, ಗೊಂಚಿಗಾರ ನಾಗರಾಜ, ಪಾಲಣ್ಣ, ಪೂಜಾರಿ ತಿಪ್ಪೇಸ್ವಾಮಿ ಬರ‌್ವೇಲ್ ತಿಪ್ಪೇಸ್ವಾಮಿ, ಸಣ್ಣ ಬೋರಯ್ಯ, ಎ.ತಿಪ್ಪೇಸ್ವಾಮಿ, ಹೇಮಂತ ರಾಜ್, ಸಣ್ಣ ಲೋಕೇಶ, ಎಸ್.ಟಿ.ಗುಂಡಪ್ಪ, ಕಾನಹೊಸಹಳ್ಳಿ ನಾಗೇಶ್, ಕರಿಯಪ್ಪ ಇತರರಿದ್ದರು.