ಹುಬ್ಬಳ್ಳಿ: ನಗರದ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಡಿ. 21ರಂದು ಬೆಳಗ್ಗೆ 11ಕ್ಕೆ ವಿಂಟರ್ ವಂಡರ್ ಲ್ಯಾಂಡ್ ಇವೆಂಟ್ ಆಯೋಜಿಸಲಾಗಿದೆ.
ಶಾಸಕ ಮಹೇಶ ಟೆಂಗಿನಕಾಯಿ, ಆಕ್ಸಫರ್ಡ್ ಗ್ರುಪ್ ಅಧ್ಯಕ್ಷ ವಸಂತ ಹೊರಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.