ಜಿಲ್ಲೆ

ಜಿಲ್ಲೆಯ ಗ್ರಾಮಾಯಣಕ್ಕೆ ತೆರೆ, ಗೆದ್ದವರಿಂದ ಗೆಲುವಿನ ನಗೆ, 144 ಸೆಕ್ಷನ್ ನಡುವೆಯೂ ಸಂಭ್ರಮಾಚರಣೆಗಿಲ್ಲ ಬ್ರೇಕ್

Bengaluru Rural

ಬೆಂಗಳೂರು ಗ್ರಾಮಾಂತರ: ಮುಂಜಾನೆಯಿಂದಲೇ ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದ್ದ ಜನ, ಲಿತಾಂಶಕ್ಕೂ ಮುನ್ನವೇ ಸಿದ್ಧವಾಗಿದ್ದ ಹಾರ ತುರಾಯಿ, ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ, ತಳ್ಳಾಟ-ನೂಕಾಟ, ನೂಗುನುಗ್ಗಲಿನ ನಡುವೆ ಚುನಾವಣಾ ಸಿಬ್ಬಂದಿ ಹೈರಾಣ, ಗೆದ್ದ ಅಭ್ಯರ್ಥಿಗಳಿಗೆ ಅದ್ದೂರಿ ಮೆರವಣಿಗೆ, ಪ್ರತಿಗ್ರಾಮದಲ್ಲೂ ಹಳ್ಳಿೈಟ್‌ನದ್ದೇ ಧ್ಯಾನ, ಹೀಗೆ ಹತ್ತು ಹಲವು ಸಂಗತಿಗಳಿಗೆ ಕಾರಣವಾದ ಹಳ್ಳಿೈಟ್ ಮತದಾರರ ನಾಡಿಮಿಡಿತವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸಿತ್ತು.

ನೆಲಮಂಗಲ ತಾಲೂಕು ಅರೆಬೊಮ್ಮನಹಳ್ಳಿ ಗ್ರಾಪಂ ಗೋವಿಂದಪುರ ಬೂತ್ ಸಂಖ್ಯೆ 153ರಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರಿಗೆ ಒಂದೂ ಮತಚಲಾವಣೆಯಾಗಿಲ್ಲ. ಬಿಸಿಎಂ ಮೀಸಲಾತಿಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹಬೀಬುಲ್ಲ ಮತದಾನದ ವೇಳೆ ಗೊಂದಲಗೊಂಡು ತಮ್ಮ ಗುರುತಿನ ಬದಲು ಮತ್ಯಾರಿಗೋ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬಸ್ಥರೂ ಮತದಾನ ಮಾಡದಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಇದೆಲ್ಲ ಪ್ರಕ್ರಿಯೆ ನಡುವೆ ಅಭ್ಯರ್ಥಿಯ ಸುಳಿವೂ ಇಲ್ಲವಾಗಿದೆ.

ಲಿತಾಂಶಕ್ಕೂ ಮೊದಲೇ ಸೇಬಿನ ಹಾರ: ದೇವನಹಳ್ಳಿಯ ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಬೆಂಬಲಿತ ಅಭ್ಯರ್ಥಿಗಳ ಲಿತಾಂಶ ಹೊರಬೀಳುವ ಮೊದಲೇ ಬೃಹತ್ ಸೇಬಿನ ಹಾರ ಸಿದ್ಧಪಡಿಸಿಕೊಂಡು ಮತ ಎಣಿಕೆ ಕೇಂದ್ರದಲ್ಲಿ ಕಾದು ಕುಳಿತುಕೊಳ್ಳುವ ಮೂಲಕ ಗಮನ ಸೆಳೆದರು.

ಜಿಲ್ಲಾಧಿಕಾರಿ ರೌಂಡ್ಸ್: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಬುಧವಾರ ಇಡೀ ದಿನ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನ ಗುಂಪುಗೂಡದಂತೆ, ಕರೊನಾ ನಿಯಮ ಉಲ್ಲಂಸದಂತೆ ಮನವಿ ಮಾಡಿದರು. ಚುನಾವಣಾ ಸಿಬ್ಬಂದಿಗೆ ಮಾರ್ಗದರ್ಶನ ನೀಡುವ ಮೂಲಕ ಲಿತಾಂಶದ ಕಾರ್ಯವಿಧಾನ ಸುಗಮಗೊಳಿಸಿದರು. ಇವರೊಂದಿಗೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ದೊಡ್ಡಬಳ್ಳಾಪುರ ತಹಸೀಲ್ದಾರ್ ಶಿವರಾಜ್ ಮತ್ತಿತರ ಅಧಿಕಾರಿಗಳ ತಂಡ ಕರ್ತವ್ಯ ನಿರ್ವಹಿಸಿದರು.

ದೊಡ್ಡಬಳ್ಳಾಪುರದಲ್ಲಿ ಲಾಠಿ ಚಾರ್ಜ್: ದೊಡ್ಡಬಳ್ಳಾಪುರ ಮತಕೇಂದ್ರದ ಬಳಿ ಸಾವಿರಾರು ಜನ ಜಮಾಯಿಸಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತ್ತು. ಅಭ್ಯರ್ಥಿಗಳ ಪರ ೋಷಣೆ ಕೂಗುತ್ತಿದ್ದ ಬೆಂಬಲಿಗರು ಕರೊನಾ ನಿಯಮ ಉಲ್ಲಂಸಿ ಮತ ಎಣಿಕೆ ಕೇಂದ್ರದ ಸುತ್ತ ಸುತ್ತುವರಿದಿದ್ದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಜನ ಚದುರದೆ ಲಿತಾಂಶದ ಗುಂಗಿನಲ್ಲಿ ಮೈಮರೆತಿದ್ದರು. ಸ್ಥಳಕ್ಕೆ ಎಸಿಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಜನರನ್ನು ನಿಯಂತ್ರಿಸಲು ಹರಸಾಹಸ ನಡೆಸಿದರು. ಯಾವುದಕ್ಕೂ ಬೆದರದ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಕರೊನಾ ನಿಯಮಕ್ಕಿಲ್ಲ ಕಿಮ್ಮತ್ತು: ಕರೊನಾ ನಿಯಮ ಪಾಲನೆಗೆ ಜಿಲ್ಲೆಯಲ್ಲಿ ಎಲ್ಲಿಯೂ ಕಿಮ್ಮತ್ತು ಸಿಗಲಿಲ್ಲ. ಮುಂಜಾನೆಯಿಂದಲೇ ತಂಡೋಪತಂಡವಾಗಿ ಮತ ಎಣಿಕೆ ಕೇಂದ್ರಗಳತ್ತ ಧಾವಿಸಿದ ಸಾವಿರಾರು ಮಂದಿ ಪರಸ್ಪರ ಅಂತರ ಮರೆತಿದ್ದರು. ಎಲ್ಲಿಯೂ ಸ್ಯಾನಿಟೈಸರ್ ವ್ಯವಸ್ಥೆ ಕಂಡುಬರಲಿಲ್ಲ. ಮತ ಎಣಿಕೆ ಕೇಂದ್ರದ ಕೂಗಳತೆ ದೂರದಲ್ಲಿ ಜನರಿಗೆ ನಿಲ್ಲಲು ಅವಕಾಶ ಮಾಡಿದ್ದರೂ ಮತ ಎಣಿಕೆ ಕೇಂದ್ರಗಳತ್ತ ದೌಡಾಯಿಸುತ್ತಿದ್ದುದು ಕಂಡುಬಂತು. ಲಿತಾಂಶ ಹೊರಬೀಳುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲಾಡಳಿತ ಏನೆಲ್ಲಾ ಮುಂಜಾಗ್ರತೆ ಕೈಗೊಂಡರೂ ಗ್ರಾಮಾಯಣದ ಮಧ್ಯೆ ಇವೆಲ್ಲವೂ ನಿರರ್ಥಕ ಎಂಬಂತಾಗಿತ್ತು.

ತಮಟೆ ಸದ್ದಿನೊಂದಿಗೆ ಮೆರವಣಿಗೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಪಂಚಾಯಿತಿಯಲ್ಲಿ ವಿಜಯ ಸಾಧಿಸಿದ ಸೋತೆನಹಳ್ಳಿಯ ಬಂಡಾಯ ಅಭ್ಯರ್ಥಿ ಕೃಷ್ಣಮೂರ್ತಿ ಅವರನ್ನು ಗ್ರಾಮಸ್ಥರು ತಮಟೆ, ನಗಾರಿ ಸದ್ದಿನೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು.

ಹೂಮಾಲೆ ಲಕ್ಷಾಂತರ ರೂ. ವಹಿವಾಟು:  ಪಂಚಾಯಿತಿ ೈಟ್‌ನಲ್ಲಿ ಗೆದ್ದವರನ್ನು ಸನ್ಮಾನಿಸಲು ಹಿಂದಿನ ದಿನದಿಂದಲೇ ಸಿದ್ಧತೆ ಮಾಡಿಕೊಂಡಿದ್ದ ಬೆಂಬಲಿಗರು ಹೂಮಾಲೆಗಳ ಖರೀದಿಗೆ ಮುಗಿಬಿದ್ದಿದ್ದರು. ನಾಲ್ಕೂ ತಾಲೂಕುಗಳಲ್ಲೂ ಸಂಭ್ರಮ ಮುಗಿಲು ಮುಟ್ಟಿದ್ದು, ಹೂಮಾಲೆಗಳಿಗೆ ಲಕ್ಷಾಂತರ ರೂ.ವಹಿವಾಟು ನಡೆದಿದೆ. ಸಾಮಾನ್ಯ ದಿನಗಳಲ್ಲಿ 100ರಿಂದ 150 ರೂ.ವರೆಗಿದ್ದ ಹೂಮಾಲೆಗಳ ದರ ಬುಧವಾರ ದುಪ್ಪಟ್ಟಾಗಿತ್ತು.

ಕುಸಿದು ಬಿದ್ದ ಅಧಿಕಾರಿ: ದೊಡ್ಡಬಳ್ಳಾಪುರ ಮತ ಎಣಿಕೆ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾಧಿಕಾರಿ ಗಂಗಾಧರ್ ಎಂಬುವವರು ರಕ್ತದೊತ್ತಡದ ಏರುಪೇರುನಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಒಂದು ಮತ ತಂದ ಅದೃಷ್ಟ: ದೇವನಹಳ್ಳಿ ತಾಲೂಕು ಜಾಲಿಗೆ ಪಂಚಾಯಿತಿಯ ಇಂಡ್ರಸನಹಳ್ಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಯಪ್ಪ ಒಂದು ಜೆಡಿಎಸ್ ಬೆಂಬಲಿತ ವೆಂಕಟೇಶ್ ವಿರುದ್ಧ 1 ವೆಂಕಟೇಶ್ 174 ಮತ ಪಡೆದಿದ್ದರೆ, ಮುನಿಯಪ್ಪ 175 ಮತಪಡೆದು ಗೆಲುವಿನ ನಗೆ ಬೀರಿದ್ದಾರೆ. ಇದೇ ಪಂಚಾಯಿತಿಯ ಬಸಪುರದ ಬಿಜೆಪಿ ಬೆಂಬಲಿತನಿಗೆ ಗ್ರಾಪಂ ಗಾದಿ ಒಲಿದು ಬಂದಿದೆ.