ಜಿಲ್ಲೆ

ಕ್ರೀಡೆಯಲ್ಲಿ ಸೋಲು&ಗೆಲವು ಸಹಜ

ಹುನಗುಂದ:ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಮನಾಗಿ ಸ್ವೀಕರಿಸಿದಾಗ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ಗುರವಾರ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಡ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪಾಠದೊಂದಿಗೆ ಆಟವು ಅಷ್ಟೇ ಮುಖ್ಯ ಆಟವು ಪ್ರತಿಯೊಬ್ಬ ಕ್ರೀಡಾಪಟು ಸಂತೋಷದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು.

ೇತ್ರ ಶಿಣಾಧಿಕಾರಿ ಜಾಸ್ಮಿನ್​ ಕಿಲ್ಲೇದಾರ ಮಾತನಾಡಿ, ಮಾನಸಿಕ ಮತ್ತು ದೆಹಿಕ ಸದಢತೆಗೆ ಕ್ರೀಡೆ ಅತ್ಯವಶ್ಯ ಎಂದು ತಿಳಿಸಿದರು.

ೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಇಳಕಲ್ಲ ನಗರಸಭೆ ಅಧ್ಯೆ ಶೋಭಾರಾಣಿ ಸಂಗಮ, ಹುನಗುಂದ ಪುರಸಭೆ ಅಧ್ಯೆ ಭಾಗ್ಯಶ್ರೀ ರೇವಡಿ, ಯುವಜನ ಕ್ರೀಡಾ ಇಲಾಖೆಯ ಇಲಾಖೆಯ ಸಹಾಯಕ ಅಧಿಕಾರಿ ಡಿ.ಸಿ.ಡೂಗನ್ನವರ ಮುತ್ತಣ್ಣ ಕಲಗೋಡಿ,ವಿಜಯಮಹಾಂತೇಶ ಗದ್ದನಕೇರಿ, ಮಹಾಂತೇಶ ಅವಾರಿ, ನಾಗರಾಜ ಹೊಸೂರ, ಸಂಗಮೇಶ ಪಾಟೀಲ್​ ಇದ್ದರು.

ಹುನಗುಂದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಬಿಇಒ ಜಾಸ್ಮಿನ್​ ಇದ್ದಾರೆ.