ಜಿಲ್ಲೆ

ಹಾಸ್ಟೆಲ್ ಬಳಿ ಕಾಣಿಸಿಕೊಂಡಿದ್ದ ಚಿಣಗಿ ಹಾವು ಸೆರೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕಲ್ಯಾಣನಗರ ಅರವಿಂದ ಹಾಸ್ಟೆಲ್ ಬಳಿ ಚಿಣಗಿ ಹಾವು (ವೈನ್ ಸ್ನೇಕ್) ಗುರುವಾರ ಕಾಣಿಸಿಕೊಂಡಿತ್ತು. ಸ್ಥಳೀಯರ ಧಾರವಾಡ ವೈಲ್ಡ್ ವೆಲ್‌ಫೇರ್ ಸೊಸೈಟಿಯ ಸ್ನೇಕ್ ಯಲ್ಲಪ್ಪ ಜೋಡಳ್ಳಿಗೆ ಮಾಹಿತಿ ನೀಡಿದರು. ಸೊಸೈಟಿ ಸದಸ್ಯೆ ಸಾಕ್ಷಿ ಕನೋಜನವರ ಅವರೊಂದಿಗೆ ಸ್ಥಳಕ್ಕೆ ತೆರಳಿದ ಯಲ್ಲಪ್ಪ ಮಾರ್ಗದರ್ಶನದಲ್ಲಿ ಸಾಕ್ಷಿ ಅವರು ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.