ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ರಕ್ತ ಪರೀಕ್ಷ್ಷಾ ಕೇಂದ್ರದ ಕಟ್ಟಡದ ಮೇಲೆ ಗಾಳಿಗೆ ಮರ ಉರುಳಿ ಬಿದ್ದಿದೆ. 
ಜಿಲ್ಲೆ

ಗಾಳಿ, ಮಳೆಗೆ ನೆಲಕ್ಕುರುಳಿದ ಮರಗಿಡಗಳು

ಹರ್ಷ ನ.ಪುರೋಹಿತ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಲ್ಲಿ ಬುಧವಾರ ಧಾರಾಕಾರವಾಗಿ ಬೀಸಿದ ಗಾಳಿ, ಮಳೆಗೆ ಮರಗಿಡಗಳು ನೆಲಕ್ಕುರುಳಿದವು.

ಮಧ್ಯಾಹ್ನ ಇಪ್ಪತ್ತು ನಿಮಿಷಗಳ ಕಾಲ ಸುರಿದ ಮಳೆಯಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರು ನಿಟ್ಟುಸಿರು ಬಿಟ್ಟರು.

ತಾಲೂಕಿನ ಹೊನ್ನೇಬಾಗಿ, ರಾಜಗೊಂಡನಹಳ್ಳಿ, ಬೆಂಕಿಕೆರೆ, ನಾರಶೆಟ್ಟಿಹಳ್ಳಿ, ಪಾಂಡೋಮಟ್ಟಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಸಿ ಹಸಿ ಮಳೆಯಾಗಿದೆ. ಮಳೆ ಜತೆಯಲ್ಲಿ ಬಾರೀ ಗಾಳಿ ಬೀಸಿದ ಕಾರಣ ಅಲ್ಲಲ್ಲಿ ಅಡಕೆ ಮರಗಳು ನೆಲಕ್ಕೆ ಉರುಳಿವೆ.

ಪಟ್ಟಣದಲ್ಲಿ ಗಾಳಿ ರಭಸಕ್ಕೆ ತರಕಾರಿ ಅಂಗಡಿ ತಗಡಿನ ಮೇಲ್ಚಾವಣಿ ಹಾರಿ ಹೋಗಿದೆ, ರಸ್ತೆ ತುಂಬ ನೀರು ಹರಿದು ವಾಹನ ಸಂಚಾರಕ್ಕೂ ಕೆಲಕಾಲ ಅಡ್ಡಿಯಾಗಿತ್ತು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.