ಬೀಳಗಿ: ಸ್ಥಳೀಯ ಜಿಎಲ್‌ಬಿಸಿ ಐಬಿಯಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವರ್ತಕರು ಹಾಗೂ ಬೀಳಗಿ ಪಟ್ಟಣದ ಎಲ್ಲ ಸಮುದಾಯದವರು ಸೇರಿ ಅನ್ಯ ರಾಜ್ಯದಿಂದ ಬಂದು ಬೀಳಗಿಯಲ್ಲಿ ನೆಲೆಸಿರುವ ಬಂಡವಾಳ ಶಾಹಿಗಳ ಹಟಾವೋ ಬೀಳಗಿ ಬಚಾವೋ ನಿರ್ಣಯ ಕೈಗೊಂಡರು.
ಅನ್ಯರಾಜ್ಯದ ಬಂಡವಾಳ ಶಾಹಿಗಳು ಅನೇಕ ಉದ್ಯೋಗ ಮಾಡುತ್ತಿರುವುದರಿಂದ ಇಲ್ಲಿಯ ಜನರಿಗೆ ಉದ್ಯೋಗವಿಲ್ಲದಂತಾಗಿದೆ. ಇದೇ ರೀತಿ ಮುಂದುವರಿದರೆ ಬೀಳಗಿ ತಾಲೂಕಿನ ಜನರು ಉದ್ಯೋಗಕ್ಕಾಗಿ ಮಂಗಳೂರು, ಉಡುಪಿ ಹಾಗೂ ಗೋವಾ, ಮಹಾರಾಷ್ಟ್ರಗಳಿಗೆ ಗುಳೆ ಹೋಗಬೇಕಾದ ಅನಿರ್ವಾತೆ ಬರುತ್ತದೆ. ಈಗಾಗಲೇ 2014ರಲ್ಲಿ ಅನ್ಯ ರಾಜ್ಯದಿಂದ ಬಂದವರಿಂದ ಇಲ್ಲಿ ಉದ್ಯೋಗ ಮಾಡಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ಮಾಡಲಾಗಿತ್ತು.
ಯುವ ಮುಖಂಡ ಪ್ರವೀಣ ಪಾಟೀಲ ಗುಂಡನಪಲ್ಲೆ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮನೆ, ಮಠ, ಆಸ್ತಿ-ಪಾಸ್ತಿಗಳ ಕಳೆದುಕೊಂಡು ನಿರಾಶ್ರಿತರಾದ ಸಂತ್ರಸ್ತರಿಗೆ ಮೊದಲೇ ಉದ್ಯೋಗವಿಲ್ಲ. ಅಂಥದರಲ್ಲಿ ಅನ್ಯರಾಜ್ಯದಿಂದ ಬಂದು ಬೇಕಾಬಿಟ್ಟಿಯಾಗಿ ಹಣ ನೀಡಿ ಅಂಗಡಿಗಳನ್ನು ಬಾಡಿಗೆ ಪಡೆದು ಇಲ್ಲಿಯ ಜನರಿಗೆ ಅಂಗಡಿ ಬಾಡಿಗೆ ಸಿಗದಂತೆ ಮಾಡುತ್ತಿದ್ದಾರೆ. ಇಲ್ಲಿಯ ವರ್ತಕರಿಗೆ ಅಂಗಡಿಗಳು ಬಾಡಿಗೆ ಸಿಗದಂತೆ ಆಗಿದೆ. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ ಸ್ಥಳೀಯರ 10 ರಿಂದ 12 ಅಂಗಡಿಗಳು ಮಾತ್ರ ಇದ್ದು, ಉಳಿದವು ಅನ್ಯ ರಾಜ್ಯದವರ ಅಂಗಡಿಗಳಿವೆ. ಇಲ್ಲಿಯ ಜನರ ಉದ್ಯೋಗ ಕಸಿದುಕೊಂಡವರಿಂದ ಬೀಳಗಿ ಬಚಾವೋ ಆಂದೋಲನಕ್ಕೆ ಸ್ಥಳೀಯರು ಸಜ್ಜಾಗಿದ್ದಾರೆ ಎಂದು ಹೇಳಿದರು.
ಅನ್ಯರಾಜ್ಯದಿಂದ ಬಂದು ನೆಲೆಸಿರುವ ಬಂಡವಾಳ ಶಾಹಿಗಳನ್ನು ಇಲ್ಲಿಂದ ಹೊರಹಾಕಬೇಕೆಂದು ಸಭೆಯಲ್ಲಿ ಕೈಗೊಂಡ ನಿರ್ಯಣಯವನ್ನು ಮುಖಂಡ ನಿಂಗಪ್ಪ ದಂಧರಗಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಸಿದ್ದು ಗಡದ, ಪಡಿಯಪ್ಪ ಕಳ್ಳಿಮನಿ, ಸಿದ್ದು ಮಾದರ, ಬಸವರಾಜ ಹಳ್ಳದಮನಿ, ಹಣಮಂತ ಹಲಗಲಿ, ಆನಂದ ಮಂಟೂರ, ಆನಂದ ಮುಳವಾಡ, ಸೂಹಿಲ್ ಸಾರವಾಡ, ಶಂಕರ ಮುಲಿಮನಿ, ಕಾಶಿಂಗೋಠೆ, ಬಸವರಾಜ ನಿಲ್ಲಪ್ಪನ್ನವರ, ನಾಗರಾಜ ಕಂಟಸಾಲಿ, ಸುಭಾಸ ನರಳಿ, ಆಕಾಶ ಪತ್ರಿಮಠ, ಪ್ರಕಾಂಶ ಮಂಚಲಕರ ಇತರರಿದ್ದರು.