ದೊಡ್ಡಬಳ್ಳಾಪುರದ ಸಿದ್ದೇನಾಯಕನಹಳ್ಳಿ ಬಳಿ ಜಿಲ್ಲಾಸ್ಪತ್ರೆಗೆ ಕಾಯ್ದಿರಿಸಲಾಗಿರುವ 9.38 ಗುಂಟೆ ಜಮೀನು. 
ಜಿಲ್ಲೆ

ದೊಡ್ಡಬಳ್ಳಾಪುರಕ್ಕೆ ಸಿಗುತ್ತಾ ಸರ್ಕಾರದ ಕೃಪೆ?

ಬೆಂಗಳೂರು ಗ್ರಾಮಾಂತರ ಡೆಸ್ಕ್

ವೆಂಕಟರಾಜು ಎಸ್​ ದೊಡ್ಡಬಳ್ಳಾಪುರ

ಅವಿಭಜಿತ ಕೋಲಾರ ಜಿಲ್ಲೆಯ ದೊಡ್ಡಬಳ್ಳಾಪುರದ ಗಡಿಭಾಗದಲ್ಲಿರುವ ನಂದಿಬೆಟ್ಟದಲ್ಲಿ ಜು.2ರಂದು ಇದೇ ಮೊದಲ ಬಾರಿಗೆ ಸಚಿವ ಸಂಪುಟ ನಡೆಯಲಿದೆ. ಹೀಗಾಗಿ ಈ ಭಾಗದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಿಗೆ ನೂರಾರು ಕೋಟಿ ಅನುದಾನ ಬರುತ್ತೆ... ಹಲವು ಪ್ರಮುಖ ಯೋಜನೆಗಳಿಗೆ ಗ್ರೀನ್​ ಸಿಗ್ನಲ್​ ಸಿಗುತ್ತೆ...ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಂಪರ್​ ಆಫರ್​ ಸಿಗುತ್ತದೆ ಎಂಬ ನಿರೀೆಗಳು ಗರಿಗೆದರಿವೆ. ಅಂತೆಯೆ ದೊಡ್ಡಬಳ್ಳಾಪುರ ತಾಲೂಕಿನ ಜನತೆಯೂ ಸಾಕಷ್ಟು ನಿರೀೆಗಳಿಂದ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಎದುರು ನೋಡುತ್ತಿದ್ದಾರೆ. ಮುಖ್ಯವಾಗಿ ಭೂಮಿ ಪೂಜೆಯಾಗಿರುವ ಜಿಲ್ಲಾಸ್ಪತ್ರೆಗೆ ಅನುದಾನ, ಕಸದ ಟಕ ಪುನರಾಂಭಕ್ಕೆ ಮುಕ್ತಿ ಸೇರಿ ಹಲವು ಭರವಸೆಗಳು ಗರಿಗೆದರಿವೆ.

ಜಿಲ್ಲಾಸ್ಪತ್ರೆಗೆ ಅನುದಾನ ನೀಡಿ: 2013ರ ಕಾಂಗ್ರೆಸ್​ ನೇತೃತ್ವದ ಹಾಲಿ ಸಿಎಂ ಸಿದ್ದರಾಮಯ್ಯ ತಾಲೂಕಿನ 100 ಹಾಸಿಗೆಗಳ ತಾಯಿ&ಮಗು ಆಸ್ಪತ್ರೆ ಲೋಕಾರ್ಪಣೆಗೆ ಆಗಮಿಸಿದ್ದ ವೇಳೆ ಇಲ್ಲಿನ ಜನಸಂಖ್ಯೆ, ರೋಗಿಗಳ ಸಂಖ್ಯೆ, ಸಮಸ್ಯೆ ಮನಗಂಡು ತಾಲೂಕು ಮತ್ತು ಜಿಲ್ಲೆಗೆ ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡುವ ಯೋಜನೆ ೂಷಿಸಿದ್ದರು. ಅಲ್ಲದೆ ಇದಕ್ಕಾಗಿಯೇ ನಗರದ ಸಿದ್ದೇನಾಯಕನಹಳ್ಳಿ ಬಳಿ 9.38 ಎಕರೆ ಜಮೀನು ಕೂಡ ಮಂಜೂರು ಮಾಡಲಾಗಿದೆ. ಹಾಲಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಕಳೆದ ವರ್ಷ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದಾರೆ. ಆದರೆ ಕಾಮಗಾರಿಗೆ ಚಾಲನೆ ನೀಡಲು ಈವರೆಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಈಗ ಅನುದಾನ ಬಿಡುಗಡೆಯ ಆಶಾಕಿರಣ ಮೂಡಿದೆ.

ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್​ ಒಪ್ಪಿಗೆ: 167 ಕೋಟಿ ರೂ. ವೆಚ್ಚದ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಬಸವರಾಜು ಬೊಮ್ಮಾಯಿ ಸಿಎಂ ಆಗಿದ್ದಾಗ ಹಾಗೂ ಡಾ.ಕೆ ಸುಧಾಕರ್​ ಆರೋಗ್ಯ ಸಚಿವರಾಗಿದ್ದಾಗ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಇದೀಗ ಬಜೆಟ್​ 192 ಕೋಟಿ ರೂ.ಗೆ ಏರಿಕೆ ಆಗಿದೆ. ಆದರೆ ಅನುದಾನ ಬಿಡುಗಡೆ ಸಾಧ್ಯವಾಗಿಲ್ಲ.

ಗ್ರಹಣ ಹಿಡಿದ ಇಎಸ್​ಐ ಆಸ್ಪತ್ರೆ ಉದ್ಘಾಟನೆ : ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅರೆಹಳ್ಳಿ&ಗುಡ್ಡದಹಳ್ಳಿಯ ಅಪೆಲ್​ ಪಾರ್ಕ್​ ಎರಡನೇ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿರುವ ಮಲ್ಟಿ ಸ್ಪೆಷಾಲಿಟಿ ಸುಸಜ್ಜಿತ ಇ.ಎಸ್​.ಐ. ಆಸ್ಪತ್ರೆ ನಿರ್ಮಾಣವಾಗಿದೆ. ಇ.ಎಸ್​.ಐ. 2013ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ ಅಂದಿನ ಸರ್ಕಾರ ಎರಡು ವರ್ಷಗಳಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿತ್ತು. ಆದರೆ 11 ವರ್ಷಗಳು ಕಳೆದರೂ ಸಹ ಉದ್ಘಾಟನೆಯಾಗಿಲ್ಲ. ಇ.ಎಸ್​.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಹಣೆ ಕೇಂದ್ರ ಸರ್ಕಾರದ್ದೋ ಅಥವಾ ರಾಜ್ಯ ಸರ್ಕಾರದ್ದೋ ಅಥವಾ ಜಂಟಿಯೋ ಎಂಬ ಜಿಜ್ಞಾಸೆಯಲ್ಲಿಯೇ ಕಾಲ ಕಳೆಯುತ್ತಿದೆ.

ಅನುದಾನ ಬಿಡುಗಡೆಗೆ ಕಾದಿರುವ ಯೋಜನೆಗಳು : ಬಜೆಟ್​ ನಲ್ಲಿ ಘೋಷಣೆಯಾಗಿ ಅನುದಾನ ಬಿಡುಗಡೆಯಾಗದೆ ತಾಲ್ಲೂಕಿನಲ್ಲಿ ಗ್ರಹಣ ಹಿಡಿಯುತ್ತಿರುವ ಯೋಜನೆಗಳು ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಸರ್ಕಾರಿ ನರ್ಸಿಂಗ್​ ಕಾಲೇಜು, ಟ್ರಾಮಾಸೆಂಟರ್​, ಸ್ಯಾಟಲೈಟ್​ ನಗರ, ನಗರೋತ್ಥಾನ ಸೇರಿ ಹಲವು ಕಾಮಗಾರಿಗೆ ಅನುದಾನ ಬಿಡುಗಡೆಯಾಗಬೇಕಿದೆ.

ಟೆರಾ ಫಾರ್ಮಾಗೆ ಅನುಮತಿ ಬೇಡ : 2015ರಲ್ಲಿ ಟೆರಾ ಫಾರ್ಮಾ ಕಸ ವಿಲೇವಾರಿ ಟಕ ಮುಚ್ಚಲಾಗಿತ್ತು. ಇದೀಗ ಇದೇ ಟಕವನ್ನು ಪುನರಾರಂಭಿಸುವ ಕುರಿತಾಗಿ ಪ್ರಸ್ತಾವನೆ ಇದೆ. ಹೈಕೋರ್ಟ್​ ತೀರ್ಪಿನ ಅನ್ವಯ ಹಾಗೂ ಕಳೆದ ಬಾರಿ ಸಿಎಂ ಸಿದ್ದರಾಮಯ್ಯನವರೇ ಮುಚ್ಚಿಸಿದ ಟೆರಾ ಫಾರ್ಮಾ ಕಸದ ಟಕವನ್ನು ಪುನಃ ತೆರೆಯಲು ಅನುಮತಿ ನೀಡಬಾರದೆಂದು ತಾಲೂಕಿನ ಜನತೆಯ ಒಕ್ಕೊರಲ ಆಗ್ರಹವಾಗಿದೆ.

ಜಿಲ್ಲಾ ಕೇಂದ್ರದ ಗೊಂದಲಕ್ಕಿಲ್ಲ ತೆರೆ : ಭೌಗೋಳಿಕವಾಗಿ, ಜಿಲ್ಲೆಯ ಕೇಂದ್ರ ಪ್ರದೇಶದಲ್ಲಿರುವ ಹಾಗೂ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಈ ಸಂಪುಟ ಸಭೆಯಲ್ಲಾದರೂ ಘೋಷಣೆಗೆ ಸರ್ಕಾರ ಸೂಕ್ತ ರ್ನಿಣಯ ಕೈಗೊಳ್ಳುವ ಭರವಸೆಯಲ್ಲಿ ಜನತೆ ಇದ್ದಾರೆ.

ಸರ್ಕಾರಗಳು ಯೋಜನೆಗಳನ್ನು ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡದಿದ್ದರೆ ಏನು ಪ್ರಯೋಜನ? ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಸರ್ಕಾರ ಕೂಡಲೇ ತಾಲೂಕಿಗೆ ಬಿಡುಗಡೆ ಮಾಡಬೇಕಿರುವ ವಿವಿಧ ಕಾಮಗಾರಿಗಳ ಅನುದಾನಗಳನ್ನು ನಂದಿಬೆಟ್ಟದ ಸಚಿವ ಸಂಪುಟ ಸಭೆಯಲ್ಲಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸುತ್ತೇನೆ. | ರಾಜಟ್ಟ ರವಿ ಕರವೇ ಮುಖಂಡ ಸರ್ಕಾರ ದೊಡ್ಡಬಳ್ಳಾಪುರಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಬಾರಿಯ ಸಂಪುಟ ಸಭೆಯಲ್ಲಿಯಾದರೂ ಜನರಿಗೆ ಅಗತ್ಯವಾಗಿರುವ ಜಿಲ್ಲಾಸ್ಪತ್ರೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಿ, ಕಸದ ಟಕ ಆರಂಭಕ್ಕೆ ಕ್ರಮ ಕೈಗೊಳ್ಳಬಾರದು. ಇಎಸ್​ಐ ಆಸ್ಪತ್ರೆಯನ್ನು ಕೇಂದ್ರ ಸರ್ಕಾರವೇ ಸಂಪೂರ್ಣ ನಿರ್ವಹಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶ್ರೀವಾಗಿ ಆರಂಭಿಸುವ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದೇನೆ. | ಧೀರಜ್​ ಮುನಿರಾಜು ಶಾಸಕ