ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡ ಮೂರುಕೆರೆ ಫೀಮೇಲ್ ಹುಲಿ.  
ಜಿಲ್ಲೆ

ಬಂಡೀಪುರ ಸಫಾರಿಯಲ್ಲಿ ವನ್ಯಜೀವಿಗಳ ದರ್ಶನ

ಮಾದೇಶ್ ತಿ.ನರಸೀಪುರ

 ಗುಂಡ್ಲುಪೇಟೆ: ಬಂಡೀಪುರಕ್ಕೆ ಸಫಾರಿಗೆ ಹೋಗುವ ಪ್ರವಾಸಿಗರಿಗೆ ವನ್ಯಜೀವಿಗಳು ದರ್ಶನ ನೀಡುತ್ತಿವೆ.

ಬಂಡೀಪುರ ಸಫಾರಿ ಮಾರ್ಗದ ಮೂರುಕೆರೆ ಸಮೀಪವೇ ಕಾಣಿಸಿಕೊಳ್ಳುವ ಮೂರುಕೆರೆ ಫೀಮೇಲ್ ಹೆಸರಿನ ಹುಲಿ ತನ್ನ ನಾಲ್ಕು ಮರಿಗಳ ಜತೆ ಸಂಚರಿಸುತ್ತ ಪ್ರವಾಸಿಗರನ್ನು ಮುದಗೊಳಿಸುತ್ತಿದೆ. ಹಸಿರು ಹುಲ್ಲು ಮೇಯುತ್ತ ಪರಸ್ಪರ ಸೊಂಡಿಲಿನಿಂದ ಚಿನ್ನಾಟವಾಡುವ ಆನೆಗಳ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಸೊಂಡಿಲುಗಳನ್ನು ಬಳಸಿ ಚಿನ್ನಾಟವಾಡುತ್ತಿರುವ ಆನೆಗಳು.