ಜಿಲ್ಲೆ

ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ

ಬೆಳ್ಮಣ್: ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಂಡ ಘಟನೆ ಪಿಲಾರುಖಾನ ಕಾಡು ಪ್ರದೇಶದಲ್ಲಿ ನಡೆದಿದೆ.

ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿ ಅಳವಡಿಸಿದ್ದು, ಒಂದು ಬದಿಯ ತಂತಿಬೇಲಿ ದಾಟಿಕೊಂಡ ಬಂದ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು. ಈ ಸಂದರ್ಭ ಬೆಳ್ಮಣ್-ಶಿರ್ವ ಸಾಗುವ ವಾಹನ ಸವಾರರು ಕೆಲಕಾಲ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವಂತಾಗಿತ್ತು. ಸುಮಾರು 15 ನಿಮಿಷ ಬಳಿಕ ಕಾಡುಕೋಣ ತಂತಿ ಬೇಲಿಯನ್ನು ದಾಟಿ ಮತ್ತೊಂದು ಬದಿಯ ಕಾಡಿಗೆ ತೆರಳಿದೆ.