ಜಿಲ್ಲೆ

ಕಾಡುಹಂದಿ ಡಿಕ್ಕಿಯಾಗಿ ಬೈಕ್ ಪಲ್ಟಿ

ಇಂದಿರಾ ಎನ್ ಕೆ

ಕಾಸರಗೋಡು: ಕಾಡು ಹಂದಿ ಡಿಕ್ಕಿಯಾದ ಪರಿಣಾಮ ಬೈಕ್ ಮಗುಚಿಬಿದ್ದು ಸವಾರ ಅಡೂರು ಅಳಿಯನಡ್ಕ ನಿವಾಸಿ ಎಚ್. ವಿಜಯನ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಡೂರು ತಲ್ಪಚ್ಚೇರಿಯ ತೋಟದ ಕಾರ್ಮಿಕರಿಗೆ ಆಹಾರ ಪೂರೈಸಿ ಬೈಕ್‌ನಲ್ಲಿ ವಾಪಸಾಗುವ ಮಧ್ಯೆ ಅಡೂರು-ಮಂಡೆಕೋಲು-ಸುಳ್ಯ ರಸ್ತೆಯ ಮುಂಡಕ್ಕಾಡ್ ಬಳಿ ಕಾಡುಹಂದಿ ರಸ್ತೆಗೆ ಜಿಗಿದಿದ್ದು, ಇದರಿಂದ ವಿಜಯನ್ ಸಂಚರಿಸುತ್ತಿದ್ದ ಬೈಕ್ ಪಲ್ಟಿಯಾಗಿತ್ತು.