ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಕಳೆದ 10 ದಿನಗಳಿಂದ ಕಡಬ ಹಾಗೂ ಪುತ್ತೂರು ತಾಲೂಕಿನ ಹಲವೆಡೆ ಆತಂಕದ ವಾತಾವರಣ ಸೃಷ್ಟಿಸಿದ್ದ ಕಾಡಾನೆಗಳು ಸೋಮವಾರ ರಾತ್ರಿ ಬೆಳ್ಳಿಪ್ಪಾಡಿ ಗ್ರಾಮದ ಬಾರ್ತೋಳಿ, ಕೊಡಿಮರ ಪ್ರದೇಶಗಳಲ್ಲಿ ಕೃಷಿ ಹಾನಿ ಮಾಡಿವೆ.
ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದಲ್ಲಿ ಎರಡು ಕಾಡಾನೆಗಳಿರುವುದನ್ನು ಅರಣ್ಯ ಇಲಾಖೆ ಮಂಗಳವಾರ ಬೆಳಗ್ಗೆ ದೃಢಪಡಿಸಿದೆ.
ಇವು ಶಾಂತಿಗೋಡು ಗ್ರಾಮದ ಕಕ್ವೆ ಮೂಲಕವಾಗಿ ಕುಮಾರಧಾರಾ ನದಿ ದಡದಲ್ಲಿ ಸಾಗಿ ಸೋಮವಾರ ರಾತ್ರಿ ಬೆಳ್ಳಿಪ್ಪಾಡಿ ಗ್ರಾಮದ ಬಾರ್ತೋಳಿಗೆ ಕಾಲಿಟ್ಟಿವೆ. ಕೃಷಿಕ ಕೇಶವ ಗೌಡ ಅವರ ಕಬ್ಬು ಬೆಳೆ, ತೆಂಗಿನ ಗಿಡ ನಾಶ ಮಾಡಿವೆ. ಮೋನಪ್ಪ ಗೌಡ, ಶೇಖರ ಗೌಡ, ಕೊಡಿಮರದ ಸಂತೋಷ್ ಅವರ ತೋಟಕ್ಕೂ ಹಾನಿ ಮಾಡಿವೆ.
ಪರಿಶೀಲನೆ: ಅರಣ್ಯ ಇಲಾಖೆ ಎ.ಸಿ.ಎಫ್ ಸುಬ್ಬಯ್ಯ ನಾಯ್ಕ, ವಲಯಾರಣ್ಯಾಧಿಕಾರಿ ಕಿರಣ್.ಬಿ.ಎಂ ಹಾಗೂ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪತ್ತೆ ಕಾರ್ಯಾಚರಣೆ ವೇಳೆ ಎರಡು ಆನೆಗಳು ಗುಡ್ಡ ಪ್ರದೇಶದಿಂದ ಇಳಿದು ರಸ್ತೆ ಬದಿ ತನಕ ಬಂದಿದ್ದರೂ ರಸ್ತೆಯಲ್ಲಿ ವಾಹನ ಕಂಡು ಮತ್ತೆ ಗುಡ್ಡ ಸೇರಿಕೊಂಡಿವೆ.
ಆನೆಗಳು ರಾತ್ರಿ ಪೊದೆ ಮರಗಳಿರುವ ಪ್ರದೇಶದಲ್ಲಿ ಉಳಿದುಕೊಂಡು, ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಾ ಮುಂದೆ ಸಾಗುತ್ತಿವೆ. ಇದೀಗ ಕೂಡುಮರದಲ್ಲಿರುವ ಕಾಡಾನೆಗಳನ್ನು ರಕ್ಷಿತಾರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸುತ್ತೇವೆ. ಇದಕ್ಕಾಗಿ ದುಬಾರೆ ಆನೆ ಸಲಹಾ ಮತ್ತು ತರಬೇತಿ ಕೇಂದ್ರದ ಪರಿಣತರನ್ನು ಕರೆಸಿದ್ದೇವೆ ಎಂದು ಎ.ಸಿ.ಎಫ್ ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ.
ರಾತ್ರಿ 12.30ಕ್ಕೆ ವೇಳೆಗೆ ಕಾಡಾನೆ ಬಂದು ಮನೆ ಅಂಗಳದ ಬದಿಯಲ್ಲಿದ್ದ ಕಬ್ಬು ಹಿಂಡು ತಿನ್ನಲಾರಂಭಿಸಿದೆ. ನಾಯಿಗಳು ಬೊಗಳಿದಾಗ ಆನೆ ಜೋರಾಗಿ ಘೀಳಿಡುತ್ತಾ ನಾಯಿಗಳನ್ನು ಓಡಿಸಿದೆ. ಹೆದರಿ ಲೈಟ್ ಆಫ್ ಮಾಡಿ, ಮನೆ ಬಾಗಿಲು ಮುಚ್ಚಿಕೊಂ ಕುಳಿತುಕೊಂಡೆವು. ಈ ಭಾಗಕ್ಕೆ ಆನೆ ಬಂದಿರುವ ಇತಿಹಾಸವೇ ಇಲ್ಲ. ಕೇಶವ ಗೌಡ, ಬಾರ್ತೋಳಿ, ಪರಿಣತ ತಂಡದಿಂದ ಕಾರ್ಯಾಚರಣೆ https://www.vijayavani.net/panchgavya-treatment-camp-at-ujire https://www.vijayavani.net/sdm-nano-jatha