ಜಿಲ್ಲೆ

ಮನೆಯಂಗಳದಲ್ಲಿ ಕಾಡಾನೆ ದಾಂಧಲೆ

ಕಿರಣ್ ಗೌಡ.ಜಿ

ಸಿದ್ದಾಪುರ: ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಗ್ರಾಮದ ನಿವಾಸಿ ಬಳಜೆಟ್ಟಿರ ಧನ್ಯರತಿ ಪೂವಯ್ಯ ಮನೆ ಮುಂಭಾಗ ಭಾನುವಾರ ಸಂಜೆ ಕಾಡಾನೆ ದಾಳಿ ನಡೆಸಿದೆ. ಮನೆಯ ಮುಂಭಾಗದಲ್ಲಿದ್ದ ತೆಂಗು, ಬಾಳೆ, ಕಾಫಿ ಗಿಡ, ಹೂವಿನ ಗಿಡಗಳನ್ನು ಕಾಡಾನೆ ನಾಶ ಮಾಡಿದೆ. ಈ ಬಗ್ಗೆ ಮಾಹಿತಿ ಪಡೆದ ತಿತಿಮತಿ ಅರಣ್ಯ ಅಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕಾಡಾನೆಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳು ಬಂದು ದಾಂಧಲೆ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.