ಜಿಲ್ಲೆ

ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಇಂದು

ಶಿವಶಂಕರ್ ಎಂ. ಹೆಬ್ಬಳ್ಳ

ಗೋಣಿಕೊಪ್ಪಲು: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಬಿರುನಾಣಿ, ಪರಕಟಗೇರಿ,ಕಳಕೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಜು.17ರಂದು ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ಹಮ್ಮಿಕೊಂಡಿದ್ದು, ಗ್ರಾಮಸ್ಥರು, ಕಾರ್ಮಿಕರು ,ಬೆಳೆಗಾರರು, ತೋಟದ ಕೆಲಸವನ್ನು ಸ್ಥಗಿತಗೊಳಿಸಿ ಎಚ್ಚರವಹಿಸಬೇಕು. ಶಾಲಾ ಮಕ್ಕಳ ಬಗ್ಗೆಯೂ ಪಾಲಕರು ಸಹಕಾರ ನೀಡುವಂತೆ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಎಸ್.ಎಲ್.ಅರವಿಂದ್ ಪ್ರಕಟಣೆಯಲ್ಲಿ ಕೋರಿದ್ದಾರೆ.