ಬೆಳ್ತಂಗಡಿ: ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿಯುಂಟು ಮಾಡಿವೆ. ಇಲ್ಲಿನ ನಿವಾಸಿಗಳಾದ ಎಂ.ಎಸ್.ಪ್ರಕಾಶ್ ಮತ್ತು ಶ್ರೀನಿವಾಸ ನಾಯ್ಕ ಎಂಬುವರಿಗೆ ಸೇರಿದ ತೋಟಗಳಿಗೆ ಕಾಡಾನೆಗಳು ನುಗ್ಗಿದೆ. ತೋಟದಲ್ಲಿ ಸುಮಾರು ನೂರಕ್ಕಿಂತ ಅಧಿಕ ಬಾಳೆ ಗಿಡ, 15ಕ್ಕೂ ಅಧಿಕ ಅಡಕೆ ಗಿಡ, ಮತ್ತು ತೆಂಗಿನಮರಗಳನ್ನು ನಾಶಪಡಿಸಿದೆ. ಕಾಡಾನೆಗಳ ಗುಂಪಿನಲ್ಲಿ ಮರಿಯಾನೆ ಸಹಿತ ಮೂರು ಕಾಡಾನೆಗಳು ಇರಬಹುದೆಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.