ಆನೇಕಲ್: ಕಣ್ಣು ಕಾಣದೆ ಪರದಾಡುತ್ತಿದ್ದ ಕಾಡೆಮ್ಮೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ರಕ್ಷಿಸಿದ್ದಾರೆ. ಸಿಗೇಕಟ್ಟೆ ಆನೆ ಬಿಡಾರದ ಬಳಿ ಕಾಡೆಮ್ಮೆ ನರಳಾಡುತ್ತಿರುವುದನ್ನು ಕಂಡ ಸಿಬ್ಬಂದಿ ಉದ್ಯಾನದ ವೈದ್ಯರಿಗೆ ಮಾಹಿತಿ ನೀಡಿದರು. ಡಾ.ಕಿರಣ್ ಕುಮಾರ್ ನೇತೃತ್ವದ ತಂಡ ಅರಿವಳಿಕೆ ನೀಡಿ ಉಪಚರಿಸಿದ ಬಳಿಕ ಕಾಡೆಮ್ಮೆ ಚೇತರಿಸಿಕೊಂಡಿದೆ. ಸಂಪೂರ್ಣವಾಗಿ ಗುಣವಾದರೆ ಕಾಡಿಗೆ ಬಿಡುವುದು, ಇಲ್ಲವಾದಲ್ಲಿ ಉದ್ಯಾನದಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಉದ್ಯಾನದ ಮೂಲಗಳು ತಿಳಿಸಿವೆ.