ಜಿಲ್ಲೆ

Hunting: ಕಾಡು ಹಂದಿ ಹೊಡೆದ 3 ಜನ ಕತಗಾಲದಲ್ಲಿ Arrest

ಕುಮಟಾ: ಕಾಡು ಹಂದಿ (Hunting) ಹೊಡೆದ ಮೂವರನ್ನು ಕುಮಟಾ ಕತಗಾಲ ವಲಯದ ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ, ಎಡತಾರೆ ಗ್ರಾಮದ ಗುರುಪ್ರಸಾದ ಗೌಡ, ಹಾಗೂ ಜಯಂತ ಶಂಕರ ಗೌಡ ಬಂಧಿತರು. ಅವರಿಂದ ಸುಮಾರು 45 ಕೆಜಿ ಕಾಡು ಹಂದಿ ಮಾಂಸ, ನಾಡ ಬಂದೂಕಿನ ಗುಂಡುಗಳು, ಕಡವೆ ಕೊಂಬುಗಳು, 3 ಬೈಕ್ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Hunting ಪ್ರಕರಣ ಭೇದಿಸಿದ ಅಧಿಕಾರಿಗಳು

ಹೊನ್ನಾವರ ಡಿಎಫ್‌ಒ ಯೋಗೀಶ ಸಿ.ಕೆ., ಕುಮಟಾ ಎಸಿಎಫ್ ಕೃಷ್ಣ ಗೌಡ ಮಾರ್ಗದರ್ಶನದಲ್ಲಿ ಕತಗಾಲ ಆರ್‌ಎಫ್‌ಒ ಪ್ರೀತಿ ನಾಯ್ಕ ,ಡಿಆರ್‌ಎಫ್‌ಒ ಹೂವಣ್ಣ ಗೌಡ, ಹರೀಶ್ಚಂದ್ರ ಪಟಗಾರ ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ್ , ಸದಾಶಿವ ಪುರಾಣಿಕ್, ಭರತ್ ಕುಮಾರ್ ಬಿ,ಮಾಳಪ್ಪ ಮಾಕೊಂಡ ,ತಾರಾ ನಾಯ್ಕ ಕಾರ್ಯಾಚರಣೆ ಡನೆಸಿದ್ದರು.