ಜಿಲ್ಲೆ

ರೈತನ ಮೇಲೆ ಕಾಡುಹಂದಿ ದಾಳಿ

ರವಿ ಎಸ್. ಬಳೂಟಗಿ

ಕಲಘಟಗಿ: ಕಾಡುಹಂದಿ ದಾಳಿ ನಡೆಸಿದ ಪರಿಣಾಮ ರೈತನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಜರುಗಿದೆ. ಗಳಗಿ ಹುಲಕೊಪ್ಪ ಗ್ರಾಮದ ರೈತ ಸಿದ್ದಲಿಂಗಪ್ಪ (ಮುದಕಪ್ಪ) ಹೂಜಿ (48) ಗಾಯಗೊಂಡವರು. ಅವರು ತಮ್ಮ ಹೊಲಕ್ಕೆ ಹುರಳಿ ಬೆಳೆ ಕೀಳಲು ಹೋದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ಗಾಯಾಳುವನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ರೈತನಿಗೆ ಇಲಾಖೆಯಿಂದ ಪರಿಹಾರ ಕೊಡಿಸಲಾಗುವುದು ಎಂದು ಆರ್‌ಎಫ್‌ಒ ಅರುಣಕುಮಾರ ಅಷ್ಟಗಿ ತಿಳಿಸಿದ್ದಾರೆ.