ಜಿಲ್ಲೆ

ಕಾಡಿನೂರಿಗೆ ನುಗ್ಗಿದ ವಿಚಿತ್ರ ಪ್ರಾಣಿಗಳು!!

Uttara Kannada - Subash Hegde

ಕಾರವಾರ: ಹಾಲಿವುಡ್ ಮೂವಿಯಲ್ಲಿ ಬರುವ ಚಿತ್ರ ವಿಚಿತ್ರ ಪ್ರಾಣಿಗಳು ಶುಕ್ರವಾರ ರಾತ್ರಿ ಕಾಡಿನೂರಿಗೆ ನುಗ್ಗಿದ್ದವು.‌ ಗ್ರಾಮಸ್ಥರು ಅವುಗಳನ್ನು ನೋಡಲು ನೆರೆದಿದ್ದರು.

ಹೌದು, ಕಾರವಾರ ತಾಲೂಕಿನಲ್ಲಿ ಅತಿ ಹೆಚ್ಚು ಕಾಡಿರುವ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ನಡೆದ ಘಟನೆಯಿದು. ಗಾಬರಿಯಾಗಬೇಕಿಲ್ಲ. ಅವ್ಯಾವವೂ ನಿಜವಾದ ಪ್ರಾಣಿಗಳಲ್ಲ. ಪ್ರಾಣಿಯ ಸ್ತಬ್ಧಚಿತ್ರಗಳು.

‌ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಶುಕ್ರವಾರ ನಡೆದ ಮಹಾದೇವ ದೇವರ ಜಾತ್ರಾ ಮಹೋತ್ಸವದಲ್ಲಿ ಹಗರಣದ ಸ್ತಬ್ಧ ಚಿತ್ರಗಳು ಗಮನ ಸೆಳೆದವು.


ಹಗರಣದಲ್ಲಿ ಹುಲಿಯ ಮೇಲೆ ಕುಳಿತ ಅಯ್ಯಪ್ಪ ಸ್ವಾಮಿ, ಸಾಯಿಬಾಬಾ ವೇಷಧಾರಿ,ಬೃಹತ್ ಗ್ರಾತದ ನರಕಾಸುರ, ಮಗು ಹಿಡಿದು ನಿಂತಿದ್ದ ರಾಕ್ಷಸಿ, ತಿಮಿಂಗಿಲ, ಬಾಲಿವುಡ್ ಚಿತ್ರಗಳಲ್ಲಿ ಕಾಣುವಂಥ ದೊಡ್ಡ ಗ್ರಾತದ ಚಿತ್ರ, ವಿಚಿತ್ರ ಜಾತಿಯ ಪ್ರಾಣಿಗಳು, ಸ್ವಾಮಿಗಳ ವೇಷ ಭೂಷಣಗಳು ನೆರೆದ ಜನರನ್ನು ರಂಜಿಸಿದವು.
ಗ್ರಾಮದ ಪ್ರತಿಭಾವಂತ ಯುವಕರು ಸ್ವಂತ ಖರ್ಚಿನಲ್ಲಿ ಈ ಸ್ತಬಧಚಿತ್ರಗಳನ್ನು ತಯಾರಿಸಿ, ಜಾತ್ರೆಯ ಸಂದರ್ಭದಲ್ಲಿ ಪ್ರದರ್ಶಿಸಿದರು. ಇದಕ್ಕಾಗಿ ಸುಮಾರು ಎರಡು ತಿಂಗಳ ಮುಂಚಿನಿಂದಲೇ ಶ್ರಮಪಡುತ್ತಾರೆ. ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಹಾಗೂ ಗಿಡಗಳನ್ನು ನೆಡಿ, ಅರಣ್ಯ ರಕ್ಷಿಸಿ ಎಂಬ ಸಂದೇಶವಿರುವ ಸ್ತಬ್ದಚಿತ್ರವೂ ಗಮನ ಸೆಳೆಯಿತು.