ಜಿಲ್ಲೆ

ಕಡಂಬು ಪ್ರದೇಶದಲ್ಲಿ ಕಾಡುಕೋಣ ಸಂಚಾರ

Mangaluru - Nishantha Narayana

ವಿಟ್ಲ: ಕಳಂಜಿಮಲೆ ಅರಣ್ಯ ವ್ಯಾಪ್ತಿಯ ಸಮೀಪದ ಕಡಂಬು ಪ್ರದೇಶದಲ್ಲಿ ಎರಡು ಕಾಡುಕೋಣಗಳು ರಸ್ತೆಬದಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.

ಸಾರ್ವಜನಿಕರು ವಾಹನದಲ್ಲಿ ಹೋಗುವ ಸಂದರ್ಭ ಕಾಡುಕೋಣ ಪತ್ತೆಯಾಗಿದ್ದು, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾಹನದ ಬೆಳಕಿಗೆ ಹೆದರಿಕೊಂಡ ಕೋಣಗಳು ಅತ್ತಿತ್ತ ಚಲಿಸುವ ರೀತಿಯಲ್ಲಿ ವಿಡಿಯೋವಿದೆ.

ವೀರಕಂಬ ಅರಣ್ಯ ಹಾಗೂ ಕಳಂಜಿಮಲೆ ಅರಣ್ಯ ಪ್ರದೇಶದ ನಡುವೆ ಓಡಾಟ ಹಿಂದೆ ಮಾಡಿಕೊಂಡಿದ್ದವು ಎಂದು ಹೇಳಲಾಗಿದೆ. ಕೆಲವು ಸಮಯದಿಂದ ವೀರಕಂಬ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ಕೆಲಸ ನಡೆಯುತ್ತಿರುವುದರಿಂದ ಕಳಂಜಿಮಲೆಯಲ್ಲೇ ಉಳಿಯುವಂತಾಗಿದೆ ಎನ್ನಲಾಗುತ್ತಿದೆ.