ರುಕ್ಸಾನಾ 
ಜಿಲ್ಲೆ

ವಾದಿ-ಎ-ಹುದಾದಲ್ಲಿ ಪತ್ನಿ ಹತ್ಯೆ, ಆರೋಪಿ ಬಂಧನ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯ ಪಕ್ಕದ ವಾದಿ-ಎ-ಹುದಾ ಬಡಾವಣೆಯಲ್ಲಿ ಕೌಟುಂಬಿಕ ಕಾರಣಕ್ಕೆ ಭಾನುವಾರ ಬೆಳಗ್ಗೆ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಾದಿ-ಎ-ಹುದಾ ಬಡಾವಣೆಯ 5ನೇ ಅಡ್ಡರಸ್ತೆಯ ನಿವಾಸಿ ರುಕ್ಸಾನಾ (38) ಕೊಲೆಯಾದ ಗೃಹಿಣಿ. ಆಕೆಯ ಪತಿ ಯೂಸುಫ್ ರೌಫ್ ಹತ್ಯೆ ಮಾಡಿದ್ದಾನೆ. ಎಸಿ(ಹವಾನಿಯಂತ್ರಿತ) ಮೆಕಾನಿಕ್ ಆಗಿದ್ದ ಯಸೂ ವೈಯಕ್ತಿಕ ಕಾರಣಕ್ಕೆ ಹತ್ಯೆ ಮಾಡಿದ್ದಾನೆ.

ಕೌಟಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಬೆಳಗ್ಗೆ ದಂಪತಿ ನಡುವೆ ಕಲಹ ಏರ್ಪಟ್ಟಿದ್ದು ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಗೆ ಇರಿದು ಕೊಲೆ ಮಾಡಿದ್ದಾನೆಂದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಾಬು ಆಂಜನಪ್ಪ, ಇನ್‌ಸ್ಪಕ್ಟೆರ್ ಕೆ.ಟಿ.ಗುರುರಾಜ್ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯನ್ನು ಬಂಧಿಸಿದ್ದು, ಪೊಲೀಸರು ವಿಚಾರಣೆಗೊಳಪಡಿಸಲಾಗಿದೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.