ಜಿಲ್ಲೆ

ಪ್ರೀತಿಸಿ ಮದುವೆ ಆದ 8 ತಿಂಗಳಿಗೆ ಪತ್ನಿಯನ್ನೇ ಕೊಂದ ಪತಿರಾಯ!

ಬೀದರ್: ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಂಟೇ ತಿಂಗಳಿಗೆ ಪ್ರಿಯತಮೆ ಬರ್ಬರವಾಗಿ ಕೊಲೆಯಾಗಿದ್ದಾಳೆ. ಅದೂ ತನ್ನ ಗಂಡನಿಂದಲೇ...

ಹೌದು ಇಂತಹದ್ದೊಂದು ಘಟನೆ ಬಸವಕಲ್ಯಾಣದ ಬೇಡರವಾಡಿ ಗ್ರಾಮದಲ್ಲಿ ನಡೆದಿದೆ. ನಾಗಮ್ಮ ಬಾಜಿರಾವ ಪಾಟೀಲ್ (22) ಕೊಲೆಯಾದ ದುರ್ದೈವಿ.

ಪ್ರೀತಿ-ಪ್ರೇಮ ಅಂತ ಮದುವೆಯಾದ ಬಾಜಿರಾವ ಪಾಟೀಲ್ ಕ್ಲುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಕುಪಿತಗೊಂಡ ಬಾಜಿರಾವ ಪಾಟೀಲ್​, ಕಟ್ಟಿಗೆಯಿಂದ ಪತ್ನಿಯನ್ನು ಥಳಿಸಿದ್ದ. ಪ್ರಜ್ಞಾಹೀನಳಾಗಿ ಬಿದ್ದ ನಾಗಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.