ಜಿಲ್ಲೆ

ಚಾಕುವಿನಿಂದ ಇರಿದು ಪತ್ನಿಯ ಕೊಲೆ

ಉತ್ತರ ಕನ್ನಡ ಡೆಸ್ಕ್

ರೋಣ: ಪತ್ನಿಯ ಶೀಲಶಂಕಿಸಿ ಪತಿಯೇ ಚಾಕುವಿನಿಂದ ಇರಿದು ನೀರಲ್ಲಿ ಮುಳುಗಿಸಿ ಕೊಲೆಗೈದ ಘಟನೆ ತಾಲೂಕಿನ ಬಾಸಲಾಪುರದಲ್ಲಿ ಬುಧವಾರ ನಡೆದಿದೆ.

ಸಂಗೀತಾ ಪಾಟೀಲ (32) ಮೃತಪಟ್ಟ ದುರ್ದೈವಿ. ಆರೋಪಿ ಮಹೇಶ ಪಾಟೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಪತ್ನಿಯ ಮೊಬೈಲ್‌ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತಿತ್ತು. ಹೀಗಾಗಿ ಪತ್ನಿಯ ಶೀಲದ ಬಗ್ಗೆ ಸಂಶಯಗೊಂಡಿದ್ದ ಮಹೇಶ ಪತ್ನಿಯನ್ನು ಹೊಲಕ್ಕೆ ಕರೆದೊಯ್ದು ಚಾಕುವಿನಿಂದ ಇರಿದಿದ್ದಾನೆ. ಅಲ್ಲದೆ, ಅಲ್ಲಿಯೇ ಇದ್ದ ಕೆರೆಯಲಿ ಮುಳುಗಿಸಲು ಯತ್ನಿಸಿದಾಗ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ಟ್ರಾೃಕ್ಟರ್‌ನಲ್ಲಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಪಿಎಸ್ ಐ.ಎಲ್.ಕೆ ಜೂಲಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.