ಜಿಲ್ಲೆ

ಪತ್ನಿ ಜಗಳ ಮಾಡಿ ತವರು ಮನೆಗೆ ಹೋದಳೆಂದು ಪತಿ ಆತ್ಮಹತ್ಯೆ

Haveri - Kariyappa Aralikatti

ಶಿಗ್ಗಾಂವಿ: ಪತ್ನಿ ಜಗಳ ಮಾಡಿ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರಿಂದ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಹನುಮಂತಪ್ಪ ಫಕ್ಕೀರಪ್ಪ ವಾಲೀಕಾರ (35) ಮೃತ ವ್ಯಕ್ತಿ.
ಈತನ ಪತ್ನಿ ಮೂರು ತಿಂಗಳ ಹಿಂದೆ ಮನೆಯಲ್ಲಿ ಜಗಳ ಮಾಡಿಕೊಂಡು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಳು. ಇದರಿಂದ ಮನನೊಂದ ಪತಿ ಹನುಮಂತಪ್ಪ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.