ಜಿಲ್ಲೆ

ಪತಿಗೆ ಹಣ ಕೊಡಲಿಲ್ಲವೆಂದು ಹೊಡೆದಿದ್ದಕ್ಕೆ ಪತ್ನಿ ಆತ್ಮಹತ್ಯೆ

ಹಾವೇರಿ: ಹಣ ಕೇಳಿದಾಗ ಕೊಡಲಿಲ್ಲವೆಂದು ಪತಿ ಹೊಡೆದಿದ್ದಕ್ಕೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ನಡೆದಿದೆ.

ರಶ್ಮೀ ಸಿದ್ದಪ್ಪ ಪಟ್ಟೇದರ (26) ಮೃತ ಮಹಿಳೆ.

ಇವಳಿಗೆ ಪತಿ ಸಿದ್ದಪ್ಪ 500 ರೂ. ಕೊಡು ಎಂದು ಕೇಳಿದ್ದಾನೆ. ಆಗ ಹಣ ಕೊಡದ ಕಾರಣ ರಶ್ಮೀಯನ್ನು ಸಿದ್ದಪ್ಪ ಹೊಡೆದಿದ್ದಾನೆ. ಇದರಿಂದ ರಶ್ಮೀ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆದರೆ, ಇಬ್ಬರು 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮೂರು ಮಕ್ಕಳು ಇದ್ದಾರೆ. ಇದರ ನಡುವೆ ಹಣ ಕೊಡಲಿಲ್ಲವೆಂದು ಹೊಡೆದಿದ್ದಕ್ಕೆ ರಶ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿ ಸಿದ್ದಪ್ಪ ನಮಗೆ ತಿಳಿಸಿದ್ದಾನೆ. ಆದ್ದರಿಂದ ಆಕೆಯ ಸಾವಿನಲ್ಲಿ ಸಂಶಯವಿದ್ದು ಈ ಕುರಿತು ತನಿಖೆ ನಡೆಸಬೇಕು ಎಂದು ಮೃತಳ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.