ಜಿಲ್ಲೆ

26ನೇ ದಿನಕ್ಕೆ ಕಾಲಿಟ್ಟ ಧರಣಿ ಸುಸಜ್ಜಿತ ಜಿಲ್ಲಾಸ್ಪತ್ರೆಯಿದ್ದರೂ ಪಿಪಿಪಿ ಮಾದರಿ ಏಕೆ?

ವಿಜಯಪುರ:ಪಿಪಿಪಿ ಮಾದರಿ ವೈದ್ಯಕಿಯ ಕಾಲೇಜು ಸ್ಥಾಪನೆ ವಿರೋಧಿಸಿ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅರ್ನಿದಿಷ್ಟಾವಧಿ ಸತ್ಯಾಗ್ರಹ ಶನಿವಾರ 25ನೇ ದಿನ ಪೂರೈಸಿತು.ಧರಣಿ ಸ್ಥಳಕ್ಕೆ ರಾಜ್ಯ ಮುಲ್ಲಾ ಅಸೋಸಿಯೇಶನ್​ ಹಾಗೂ ಜಮಖಂಡಿಯ ಹಲವು ಮಹಿಳಾ ಸಂಟನೆಗಳ ಪದಾಧಿಕಾರಿಗಳು ಆಗಮಿಸಿ ಬೆಂಬಲ ಸೂಚಿಸಿದರು.

ಕಾರ್ಮೆಲ್​ ಆಶಿಶ್​ ಚಾರಿಟೇಬಲ್​ ಟ್ರಸ್ಟ್​ನ ಯೋಜನಾ ಸಂಯೋಜಕಿ ಜಯಾ ರಾಜು ಪಿಳ್ಳೆ ಮಾತನಾಡಿ, ವಿಜಯಪುರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಟ್ರಸ್ಟ್​ನ ಸಂಪೂರ್ಣ ಬೆಂಬಲವಿದೆ. ಸರ್ಕಾರಿ ವೈದ್ಯಕಿಯ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಜಯಪುರಕ್ಕೆ ಅನ್ಯಾಯ ಮಾಡುತ್ತಿದೆ. ಸ್ಥಳಿಯ ಜನಪ್ರತಿನಿಧಿಗಳು ಒಂದಾಗಿ ಸರ್ಕಾರಕ್ಕೆ ಮನವರಿಕೆ ಮಾಡುವ ಜತೆಗೆ ಕೂಡಲೇ ಸರ್ಕಾರಿ ವೈದ್ಯಕಿಯ ಕಾಲೇಜು ಪ್ರಾರಂಭಿಸಲು ಒತ್ತಡ ಹೇರಬೇಕು ಎಂದು ಕರೆ ನೀಡಿದರು.

ಟ್ರಸ್ಟ್​ನ ಸಂಯೋಜಕಿ ಸುಮಿತ್ರಾ ಬೋರಗಿ ಮಾತನಾಡಿ, ಇಲ್ಲಿನ ಜಿಲ್ಲಾಸ್ಪತ್ರೆಗೆ ಜಮಖಂಡಿ ಭಾಗದಿಂದಲೂ ಕೆಲವರು ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಅಷ್ಟು ಸುಸಜ್ಜಿತವಾದ 150 ಎಕರೆ ಪ್ರದೇಶದಲ್ಲಿರುವ ಜಿಲ್ಲಾಸ್ಪತ್ರೆ ಇರುವಾಗ ರಾಜ್ಯ ಸರ್ಕಾರ ಪಿಪಿಪಿ ಮಾದರಿ ವೈದ್ಯಕಿಯ ಕಾಲೇಜು ಸ್ಥಾಪಿಸಲು ಏಕೆ ಮುಂದಾಗುತ್ತಿದೆ? ಎಂದು ಪ್ರಶ್ನಿಸಿದರು.

ರಾಜ್ಯ ಮುಲ್ಲಾ ಅಸೋಸಿಯೇಶನ್​ ರಾಜ್ಯ ಉಪಾಧ್ಯ ಇಮ್ತಿಯಾಜ್​ ಮುಲ್ಲಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.ಕಾರ್ಮೆಲ್​ ಆಶಿಶ್​ ಚಾರಿಟೇಬಲ್​ ಟ್ರಸ್ಟ್​ ಅಡಿಯ ಮಹಿಳಾ ಸಂಟನೆಗಳಾದ ಉನ್ನತಿ ಸ್ವ ಸಹಾಯ ಸಂ, ಕೀರ್ತಿ ಸ್ವ ಸಹಾಯ ಸಂ, ವಿಜಯಲಕ್ಷಿ$್ಮ ಸ್ವ ಸಹಾಯ ಸಂ, ಸಂವಿಧಾನ ಶಿಲ್ಪಿ ಭೀಮರಾವ ಸ್ವ ಸಹಾಯ ಸಂ, ಹೊಸಬೆಳಕು ಸ್ವ ಸಹಾಯ ಸಂ, ದುರ್ಗಾದೇವಿ ಸ್ವ ಸಹಾಯ ಸಂ, ಪ್ರಗತಿ ಸ್ವ ಸಹಾಯ ಸಂ ಹಾಗೂ ಸಾವಿತ್ರಿಬಾಯಿ ಪುಲೆ ಸ್ವ ಸಹಾಯ ಸಂದವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿದ್ಯಾಶ್ರೀ ಕಾಂಬ್ಳೆ, ಸುವರ್ಣ ಹರಿಜನ, ಲಲಿತಾ ಕಡಿಯಪ್ಪ, ಕಸ್ತೂರಿ ಕಾಂಬ್ಳೆ, ಶಶಿಕಲಾ ಕಾಂಬ್ಳೆ, ಪ್ರೀತಿ ಕಾಂಬ್ಳೆ, ರುಕ್ಮಿಣಿ ಕಾಂಬ್ಳೆ, ರೂಪಾ ಕಾಂಬ್ಳೆ, ಗೀತಾ ಕಾಂಬ್ಳೆ, ಸರಸ್ವತಿ ಕಾಂಬ್ಳೆ, ಪುಲಾಬಾಯಿ ಮಾದರ, ಶಂಬಲಾ ಮಾದರ, ಮಂಗಳಾ ಕಾಂಬ್ಳೆ, ಗೀತಾ ಕಾಂಬ್ಳೆ, ಸುಮವ್ವ ಕಾಂಬ್ಳೆ, ರಾಜಶ್ರೀ ಮಗಾಡಿ, ನಿಂಗವ್ವ ಸಿಂಗಿ, ರಾಜಶ್ರೀ ಕಾಗಿ, ತೇಜಸ್ವಿನಿ ಕಾಂಬ್ಳೆ, ಸುನಿತಾ ಕಾಂಬ್ಳೆ, ಸುನಿಲ ಕಾಂಬ್ಳೆ, ಅಬೂಬಕರ ಮುಲ್ಲಾ, ಬಂದೆನವಾಜ್​ ಮುಲ್ಲಾ, ಇಮಾಮಸಾಬ್​ ಮುಲ್ಲಾ, ನಬಿಸಾಬ್​ ಮುಲ್ಲಾ, ಎಸ್​.ಸಿ. ಮುಲ್ಲಾ, ಹೋರಾಟ ಸಮಿತಿ ಸದಸ್ಯರಾದ ಭಗವಾನ ರೆಡ್ಡಿ, ಲಲಿತಾ ಬಿಜ್ಜರಗಿ, ಅರವಿಂದ ಕುಲಕರ್ಣಿ, ಅಕ್ರಮ ಮಾಶಾಳಕರ, ಶ್ರೀನಾಥ ಪೂಜಾರಿ, ಗಿರೀಶ ಕಲಟಗಿ, ಲಕ್ಷ$್ಮಣ ಕಂಬಾಗಿ, ಭೋಗೇಶ ಸೋಲಾಪುರ, ನೀಲಂಬಿಕಾ ಬಿರಾದಾರ, ಲಿಂಗರಾಜ ಬಿದರಕುಂದಿ, ಜಬೀನಾ ಅಥಣಿ, ಸಿದ್ದರಾಮಯ್ಯ ಹಿರೇಮಠ, ಸಿದ್ದಲಿಂಗ ಬಾಗೇವಾಡಿ ಮತ್ತಿತರರಿದ್ದರು.

ಪಿಪಿಪಿ ಮಾದರಿ ವೈದ್ಯಕಿಯ ಕಾಲೇಜು ಸ್ಥಾಪನೆ ವಿರೋಧಿಸಿ ವಿಜಯಪುರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಸತ್ಯಾಗ್ರಹಕ್ಕೆ ವಿವಿಧ ಸಂಟನೆಗಳು ಬೆಂಬಲ ಸೂಚಿಸಿದವು. ಅರವಿಂದ ಕುಲಕರ್ಣಿ, ವಿದ್ಯಾಶ್ರೀ ಕಾಂಬ್ಳೆ, ಸುವರ್ಣ ಹರಿಜನ ಮತ್ತಿತರರಿದ್ದಾರೆ.