ಮೈಸೂರು: ರಾಜ್ಯದಲ್ಲಿ ಪಿಎ್ಐ, ಎಸ್ಡಿಪಿಐ ಅವರ ಹಾವಳಿ ಹೆಚ್ಚಾಗಲು ಕೇರಳದ ಕಾಕಾ(ಮುಸ್ಲಿಮರು)ಗಳೇ ಕಾರಣ. ಕೇರಳದ ಕಾಕಾಗಳು ಕರ್ನಾಟಕಕ್ಕೆ ಯಾಕೆ ಬರಬೇಕು? ಅವರಿಂದ ರಾಜ್ಯದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ತರಕಾರಿ ಖರೀದಿಗೆ ಆಗಮಿಸುತ್ತಿದ್ದ ಕೇರಳದವರು ಇದೀಗ ಜಮೀನು ಮಾಲೀಕರಾಗಿ ಕರ್ನಾಟಕದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ಕೇರಳದ ಕಾಕಾಗಳ ಹಾವಳಿ ಹೆಚ್ಚಾಗಿದೆ ಎಂದರು.
ಕೇರಳದ ಮುಸ್ಲಿಮರು ರಾಜ್ಯದಲ್ಲಿ ಹಿಂದುಗಳ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ನಿಮ್ಮ ಅಂಗಡಿಗಳಿಗೆ ಇಸ್ಮಾಯಿಲ್ , ಮುಬಾರಕ್ ಅಂತ ಹೆಸರು ಇಟ್ಟುಕೊಳ್ಳಿ. ಮುಸ್ಲಿಂ ಹೆಸರು ಇಟ್ಟುಕೊಂಡರೆ ವ್ಯಾಪಾರ ಆಗುವುದಿಲ್ಲ ಎಂದು ಹಿಂದೂಗಳ ಹೆಸರು ಇಟ್ಟುಕೊಳ್ಳುತ್ತಿದ್ದಾರೆ. ಇವರನ್ನು ಹೀಗೇ ಬಿಟ್ಟರೆ ಎಲ್ಲ ಕಡೆಗಳಲ್ಲೂ ಛೋಟಾ ಜಾರ್ಜ್, ಛೋಟಾ ಹ್ಯಾರೀಸ್ಗಳು ಶಾಸಕರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇರಳದಲ್ಲಿರುವ ಹಿಂದೂಗಳು ಕೂಡ ಅಲ್ಲಿನ ಕಾಕಾಗಳಿಂದ ಅಪಾಯದಲ್ಲಿದ್ದಾರೆ. ಕೇರಳದ ಹಿಂದೂಗಳು ಜಾತಿ ಹೆಸರಲ್ಲಿ ಛಿದ್ರವಾಗದೆ ಒಂದಾಗಬೇಕು. ಅದೇ ರೀತಿ ಕೇರಳದ ಕಾಕಾಗಳಿಂದ ಕೊಡಗು ಅಪಾಯದಲ್ಲಿದೆ. ಕೇರಳದವರು ನಮ್ಮಲಿ ಯಾಕೆ ಓದಲು ಬರಬೇಕು? ನಮ್ಮಲಿ ಯಾಕೆ ಕೆಲಸಕ್ಕೆ ಬರಬೇಕು?. ಕನ್ನಡಿಗರು ಕೇರಳಕ್ಕೆ ಪ್ರವಾಸ, ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲಸಕ್ಕಾಗಿ ನಾವೇನು ಅಲ್ಲಿಗೆ ಹೋಗುವುದಿಲ್ಲ. ಕೇರಳದವರು ಅಲ್ಲೇ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳನ್ನು ನಿರ್ಮಾಣ ಮಾಡಲಿ. ಕೇರಳಿಗರು ನಮ್ಮಲಿಗೆ ಬರುವುದು ಬೇಡ. ಕರ್ನಾಟಕ ಎಲ್ಲರಿಗೂ ನಿರಾಶ್ರೀತರ ತಾಣವಾಗಿದೆಯಾ ಎಂದು ಪ್ರಶ್ನಿಸಿದರು.
ಕೊಡಗಿನವರು ತಮ್ಮ ತೋಟಗಳನ್ನು ಕೇರಳದವರಿಗೆ ಮಾರಾಟ ಮಾಡಬೇಡಿ ಎಂದು ನಾನು ಹೇಳಿಕೆ ನೀಡಿದ್ದೆ, ಈ ಹೇಳಿಕೆಯಲ್ಲಿ ತಪ್ಪೇನು ಇದೆ. ನಾನು ಕೊಡಗಿನ ಮಲಯಾಳಿ ಹಿಂದೂಗಳು ಕುರಿತು ಟೀಕೆ ಮಾಡಿಲ್ಲ. ಅವರು ಸಹ ನಮ್ಮ ಸಂಸ್ಕೃತಿಯ ಭಾಗ. ನನ್ನ ಹೇಳಿಕೆ ಕೇರಳದಿಂದ ಬರುವ ಹಿಂದೂ ವಿರೋಗಳ ಕುರಿತು ಎಂದು ಸ್ಪಷ್ಟಪಡಿಸಿದರು.
ಕೊಡಗಿನ ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದು ಯಾರು? ಟಿಪ್ಪು ಜಯಂತಿ ವಿರೋಧ ಮಾಡಿದ ಕೊಡಗಿನ ಕುಟ್ಟಪ್ಪ ಅವರನ್ನು ಹತ್ಯೆ ಮಾಡಲಾಯಿತು. ಮಡಿಕೇರಿಯಲ್ಲಿ ಗೋ ಮಾಂಸ ಮಾರಾಟ ಮಾಡುತ್ತೇವೆ ಅಂತ ಹೇಳಿದ್ದು ಯಾರು? ಇಂತಹ ಕೇರಳದವರು ರಾಜ್ಯಕ್ಕೆ ಬಂದರೆ ನಮ್ಮ ಸಂಸ್ಕೃತಿ ಉಳಿಯುವುದಿಲ್ಲ ಎಂದು ಹೇಳಿದರು.
ತಮಿಳುನಾಡಿನ ಕಾರ್ತಿಕ ಬೆಟ್ಟದಲ್ಲಿ ದೀಪ ಹಚ್ಚಲು ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಸೃಷ್ಟಿಯಾಗಿದ್ದು ಅಲ್ಲಿನ ಮುಸ್ಲಿಮರು ಹಾಗೂ ಮುಖ್ಯಮಂತ್ರಿ ಜೋಸ್ೆ ವಿಜಯ್ ಅವರಿಂದ. ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ನಿರ್ಮಾಣ ಆಗಬಾರದು ಎಂದರು.
1955ರಲ್ಲಿ ನೆಹರು, 1976ರಲ್ಲಿ ಇಂದಿರಾ ಗಾಂ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು. ಅಂಬೇಡ್ಕರ್ಗೆ ಭಾರತ ರತ್ನ ಕೊಡಲಿಲ್ಲ. ಅವರ ಅಂತ್ಯಕ್ರಿಯೆಗೆ ಒಂದು ಎಕರೆ ಜಾಗ ಸಹ ನೀಡಲಿಲ್ಲ. ನೆಹರು, ಇಂದಿರಾಗಾಂ, ಸಂಜಯ್ ಗಾಂ ಸ್ಮಾರಕಕ್ಕೆ ನೂರಾರು ಎಕರೆ ಜಾಗ ನೀಡಿದರು. ಇದೀಗ ಕಾಂಗ್ರೆಸ್ ನಾಯಕರಿಗೆ ಸಂವಿಧಾನ ನೆನಪಾಗುತ್ತಿದೆ. ಸಂವಿಧಾನಕ್ಕೆ ಅಂಬೇಡ್ಕರ್ ಬರೆದಿದ್ದ ಪೀಠಿಕೆ ಈಗ ಇಲ್ಲ, ಇಂದಿರಾಗಾಂ ಬರೆಸಿದ ಪೀಠಿಕೆ ಇದೆ. ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಅಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಲಿತರು, ಸಂವಿಧಾನ ನೆನಪಾಗಿದೆ. ಸಿದ್ದರಾಮಯ್ಯ ಎರಡು ಬಾರಿ ದಲಿತರಿಗೆ ಸಿಎಂ ಖುರ್ಚಿ ಕೊಡಲಿಲ್ಲ. ದಲಿತರ ಬಗ್ಗೆ ನಿಜವಾಗಿ ಪ್ರೀತಿ ಕಾಳಜಿ ಇರೋದು ಬಿಜೆಪಿಗೆ. ಮಾಯಾವತಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಎಂದರು.