ಜಿಲ್ಲೆ

ಹಿಟ್ ಆ್ಯಂಡ್ ರನ್ ಮಾಡುವುದೇಕೆ?: ಎಚ್‌ಡಿಕೆಗೆ ಡಿಸಿಎಂ ಡಿಕೆಶಿ ಪ್ರಶ್ನೆ

ಆರ್.ತುಳಸಿಕುಮಾರ್

ಬೆಂಗಳೂರು: ಕುಮಾರಸ್ವಾಮಿ ಜೀವನ ಪೂರ್ತಿ ಹಿಟ್ ಆ್ಯಂಡ್ ರನ್ ಮಾಡುವುದೇ ಆಗಿದೆ. ಬೀದಿಯಲ್ಲಿ ಹೇಳಿಕೆ ನೀಡುವ ಬದಲು ಬಹಿರಂಗವಾಗಿ ಚರ್ಚೆಗೆ ಬರಲಿ. ಇಲ್ಲವೇ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ . . .

ಇದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿಗೆ ಸವಾಲು ಎಸೆದ ಪರಿ. ಪದೇ ಪದೆ ಕುಮಾರಸ್ವಾಮಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನೇ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಆರೋಪ ಮಾಡುವ ಬದಲು ನೇರವಾಗಿ ಚರ್ಚೆಗೆ ಬಂದಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಡಿಸಿಎಂ ಪ್ರತಿಸವಾಲು ಹಾಕಿದರು.

ಸೋಮವಾರ ವೈಟ್ ಟಾಪಿಂಗ್ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ಅವರು ಹತಾಶೆಯಲ್ಲಿದ್ದಾರೆ. ಅವರಂತೆ ನಾನು ಹಿಟ್ ಆ್ಯಂಡ್ ರನ್ ಮಾಡುವುದಿಲ್ಲ. ಎಚ್‌ಡಿಕೆ ಕಸದ ಲಾರಿ ಹೊಡೆಯುತ್ತಿದ್ದವರು. ಅವರ ಸಹೋದರ ಹಾಗೂ ಪಕ್ಷದ ಸದಸ್ಯರಿಗೆ ದಾಖಲೆ ನೀಡಿ ಸದನದಲ್ಲಿ ಚರ್ಚೆ ಮಾಡಿದರೆ ಕಿಂಗ್ ಆಫ್​ ಕರಪ್ಶನ್ ಯಾರೆಂದು ಸತ್ಯ ತಿಳಿಯುತ್ತದೆ ಎಂದು ಟೀಕಿಸಿದರು.