ಆನೇಕಲ್: ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ನಿನ್ನೆಯಿಡೀ ಸುರಿದ ಭಾರಿ ಮಳೆಗೆ ಭಾರಿ ಅನಾಹುತಗಳು ಸೃಷ್ಟಿಯಾಗಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಂತೂ ಒಂದಿಡೀ ಗ್ರಾಮವೇ ಜಲಾವೃತಗೊಂಡಿದ್ದು, ಅಲ್ಲಿನ ಜನತೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಆನೇಕಲ್ ತಾಲೂಕಿನ ಬನಹಳ್ಳಿ ಸುತ್ತಮುತ್ತಲಿನ ಪ್ರದೇಶ ಪೂರ್ತಿ ನೀರು ಆವರಿಸಿಕೊಂಡಿದ್ದು, ಮನೆ, ಅಂಗಡಿ-ಮುಂಗಟ್ಟು, ಹೊಲ, ಗದ್ದೆ ಎಲ್ಲವೂ ಜಲಾವೃತವಾಗಿದೆ. ನೋಟ ಹಾಯಿಸಿದಲ್ಲೆಲ್ಲ ನೀರೇ ಕಾಣಿಸುತ್ತಿದ್ದು, ಜನರು ಮನೆಗೆ ನುಗ್ಗಿರುವ ನೀರು ಹೊರಹಾಕಲು ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಬಿಡಿಎನಲ್ಲಿ ಭಾರಿ ಭ್ರಷ್ಟಾಚಾರ?; ಎಸಿಬಿಯ 67 ಮಂದಿಯಿಂದ ಏಕಕಾಲಕ್ಕೆ ದಾಳಿ, ತನಿಖೆ ಇನ್ನೂ ಪ್ರಗತಿಯಲ್ಲಿ…
ಭಾರಿ ಮಳೆಯ ನೀರು ಹೀಗೆ ಗ್ರಾಮದಲ್ಲಿ ನೆಲೆ ನಿಲ್ಲಲು ರಾಜಕಾಲುವೆ ಒತ್ತುವರಿ ಆಗಿರುವುದೇ ಕಾರಣ ಎನ್ನಲಾಗಿದೆ. ಸದ್ಯ ಗ್ರಾಮವೇ ಜಲಾವೃತವಾಗಿದ್ದು ಜನರು ಸಂಕಷ್ಟದಲ್ಲಿರುವಾಗ, ಮತ್ತೆ ಮಳೆ ಬೀಳುವ ಲಕ್ಷಣಗಳು ಗೋಚರಿಸುತ್ತಿದ್ದು, ಇನ್ನೂ ಮಳೆ ಮುಂದುವರಿದರೆ ಹೇಗೆ ಎನ್ನುವ ಭಯದಲ್ಲೇ ಜನರಿದ್ದಾರೆ.