ಬಂದ್ ಬೆಂಬಲಿಸಬೇಕೆಂದು ಅಖಂಡ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಬುಧವಾರ ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಪಾದಯಾತ್ರೆ ತೆರಳಿ ಕೋರಿದರು. 
ಜಿಲ್ಲೆ

ಅಖಂಡ ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ಬಳ್ಳಾರಿ ಬಂದ್: ಬೆಂಬಲಿಸಲು ಹೋರಾಟ ಸಮಿತಿ ಕೋರಿಕೆ

Ballari

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ಅಖಂಡ ಜಿಲ್ಲಾ ಹೋರಾಟ ಸಮಿತಿ ನ.26ರಂದು ಬಳ್ಳಾರಿ ಬಂದ್‌ಗೆ ಕರೆ ನೀಡಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಬೆಂಬಲಿಸುವಂತೆ ಹೋರಾಟ ಸಮಿತಿ ಮುಖಂಡರು ಬುಧವಾರ ನಗರದಲ್ಲಿ ವರ್ತಕರಿಗೆ ಮನವಿ ಮಾಡಿದರು. ಸಾಹಿತಿಗಳು, ಕಲಾವಿದರು, ಉದ್ಯಮಿಗಳು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ನಾಯಕರು ಬಂದ್‌ನಲ್ಲಿ ಪಾಲ್ಗೊಳ್ಳಬೇಕೆಂದು ಹೋರಾಟ ಸಮಿತಿಯವರು ಕೋರಿದ್ದಾರೆ.

ಅಖಂಡ ಜಿಲ್ಲೆಗಾಗಿ ಒತ್ತಾಯಿಸಿ ನ.27ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು. ದಿನ ಒಂದು ಸಂಘಟನೆ ಧರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಕುರಿತು ಸಭೆ ಸೇರಿ ರೂಪುರೇಷೆ ಸಿದ್ಧಪಡಿಸಲಾಗುವುದು. ಹೋರಾಟವನ್ನು ವಿವಿಧ ತಾಲೂಕುಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ತಿಳಿಸಿದ್ದಾರೆ.