ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿವೃತ್ತಿ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ಡಿಜಿ-ಐಜಿಪಿ ನೇಮಕವಾಗಲಿದೆ. ಸೇವಾ ಹಿರಿತನ ಆಧಾರದ ಮೇಲೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರವೀಣ್ ಸೂದ್, ಪಿ.ಕೆ.ಗರ್ಗ್ ಹೆಸರು ಪಟ್ಟಿಯಲ್ಲಿವೆ.
ಈ ಮೂವರ ಪೈಕಿ ದಂಡನಾಯಕನ ಪಟ್ಟ ರಾಜ್ಯ ಆತಂರಿಕ ಭದ್ರತಾ ವಿಭಾಗ ಡಿಜಿಪಿ ಆಗಿರುವ ಬಿಹಾರ ಮೂಲದ 1985ನೇ ಬ್ಯಾಚ್ನ ಎ.ಎಂ.ಪ್ರಸಾದ್ಗೆ
ಸೇವಾ ಹಿರಿತನದ ಮೇಲೆ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಿಐಡಿ ಡಿಜಿಪಿಯಾಗಿರುವ ಹಿಮಾಚಲಪ್ರದೇಶ ಮೂಲದ 1986ನೇ ಬ್ಯಾಚ್ನ ಪ್ರವೀಣ್ ಸೂದ್ ಪ್ರಬಲ ಪೈಪೋಟಿಯಲ್ಲಿದ್ದಾರೆ. 9 ತಿಂಗಳ ಸೇವಾವಧಿ ಇರುವ ಪ್ರಸಾದ್, ಅಕ್ಟೋಬರ್ನಲ್ಲಿ ನಿವೃತ್ತರಾಗಲಿದ್ದಾರೆ. ಸೂದ್ಗೆ
4 ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಇವರ ಹೆಸರುಗಳು ಮುಂಚೂಣೆಯಲ್ಲಿವೆ. ಇನ್ನು ರಾಜಸ್ಥಾನ ಮೂಲದ 1986ನೇ ಬ್ಯಾಚ್ನ ಪಿ.ಕೆ.ಗರ್ಗ್ ಅರ್ಹತೆ ಹೊಂದಿದ್ದರೂ ಇವರಿಬ್ಬರ ನಡುವೆ ಅವಕಾಶ ಸಾಧ್ಯತೆ ಕಡಿಮೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ವಿವಾದದ ಬಳಿಕ ರಾಜ್ಯದಲ್ಲಿ ಸೇವಾ ಹಿರಿತನದ ಮೇಲೆಯೇ ಡಿಜಿ-ಐಜಿಪಿ ನೇಮಕ ನಡೆದುಕೊಂಡು ಬಂದಿದೆ. ಈ ಬಾರಿಯೂ ಸೇವಾ ಹಿರಿತನ ಮಾನದಂಡದ ಮೇಲೆ ನೇಮಕಾತಿ ನಡೆಯಲಿದೆ ಎನ್ನಲಾಗಿದೆ.