> ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಗಿರಿನಗರ ಸಮೀಪದ ಎಸ್ಬಿಎಂ ಕಾಲನಿ 80 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳು ನಡೆಯುತ್ತಿದ್ದು, ನಿಧಾನಗತಿಯ ಕೆಲಸದಿಂದ ಜನರಿಗೆ ಸಂಚಾರ ಸಿಕ್ಕಿನ ಕಿರಿಕಿರಿ ಉಂಟಾಗಿದೆ. ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಜೀವನವೇ ಸಂಕಷ್ಟವಾಗಿದೆ.
ಕಾಮಗಾರಿ ಪ್ರಾರಂಭವಾಗಿ ತಿಂಗಳು ಕಳೆದಿದೆ. ಇನ್ನು 6 ತಿಂಗಳ ಕೆಲಸ ಬಾಕಿ ಇದ್ದು, ಇದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಾಡಹಬ್ಬ ದಸರಾ ಪ್ರಾರಂಭವಾಗುತ್ತಿದ್ದು, ಅತಿಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಹಾಗೂ ಉತ್ತಮ ವ್ಯಾಪಾರ&ವಹಿವಾಟಿನ ಸಂದರ್ಭದಲ್ಲಿ ಈ ರೀತಿ ತೊಂದರೆ ನೀಡುತ್ತಿರುವುದು ಬೇಸರ ತರಿಸಿದೆ ಎಂದು ಈ ರಸ್ತೆಬದಿಯ ವ್ಯಾಪಾರಿಗಳು ಅವಲತ್ತುಕೊಂಡಿದ್ದಾರೆ.
ಕಾಮಗಾರಿಗಳು ನಡೆಯುತ್ತಿರುವುದರಿಂದಲೇ ಈ ಮಾರ್ಗದಲ್ಲಿ ಸಂಚಾರ ನಡೆಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಮಂದಿ ಹತ್ತಿರದ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದರೆ, ಏಕಮುಖವಾಗಿ ವಾಹನಗಳು ಸಂಚಾರ ನಡೆಸಿದರೂ ವಿರುದ್ಧ ದಿಕ್ಕಿನಿಂದ ದೊಡ್ಡ ಗಾತ್ರದ ವಾಹನವೊಂದು ಬಂದರೆ ಸಾಕು ಸೀತಾ ಸರ್ಕಲ್ನಿಂದ ಮುಖ್ಯರಸ್ತೆ ಸೇರುವತನಕ ಕಿಮೀ ಗಟ್ಟಲೆ ವಾಹನದಟ್ಟಣೆ ಉಂಟಾಗುತ್ತದೆ. ಜತೆಗೆ ನಿತ್ಯವೂ ಧೂಳಿನ ಮಜ್ಜನ, ಕಲುಷಿತ ವಾತಾವರಣ ಸಾಮಾನ್ಯ ದೃಶ್ಯವಾಗಿದೆ.
ಅವಡಕ್ಕೆ ಆಹ್ವಾನ ನೀಡುವ ಹೊಂಡಗಳು: ರಸ್ತೆಗೆ ವೈಟ್ ಟಾಪಿಂಗ್ ಜತೆಗೆ ವಿದ್ಯುತ್, ನೀರು ಸಂಬಂಧಿಸಿದಂತೆ ಹಲವು ಕೆಲಸಗಳು ಜತೆಯಲ್ಲೇ ನಡೆಯುತ್ತಿರುವುದರಿಂದ ಈ ರಸ್ತೆ ಸಮಸ್ಯೆಗಳ ಆಗರವಾಗಿದೆ. ರಸ್ತೆಯ ಇಬ್ಭಾಗದಲ್ಲೂ ಹೊಂಡಗಳನ್ನು ಅಗೆಯಲಾಗಿದೆ. ಮಣ್ಣನ್ನು ಅಲ್ಲೇ ಪಕ್ಕದಲ್ಲಿ ಗುಡ್ಡೆ ಹಾಕಲಾಗಿದೆ. ಇದರಿಂದ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಹಲವು ಮಂದಿ ಹೊಂಡದ ಪಕ್ಕದಲ್ಲಿ ಬಿದ್ದಿದ್ದು, ಹೆಚ್ಚಿನ ಅಪಘಾತಗಳು ನಡೆಯುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಸಂಚಾರ ನರಕ ಸದೃಶವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥಿತವಾಗಿ ಕಾಮಗಾರಿ ನಡೆಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಹತ್ತಿರದಲ್ಲಿ ಆಸ್ಪತ್ರೆಗಳಿವೆ. ಅಲ್ಲಿಗೆ ಬರುವ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಇನ್ನು ಸುಮಾರು 6 ತಿಂಗಳು ಕೆಲಸ ನಡೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ನಮ್ಮ ವ್ಯಾಪಾರವೆಲ್ಲ ದಿಕ್ಕಿಲ್ಲದಂತಾಗುತ್ತದೆ. ಅಧಿಕಾರಿಗಳು ಇತ್ತ ಹೆಚ್ಚು ಗಮನಹರಿಸಬೇಕು. > ಸಯ್ಯದ್, ವ್ಯಾಪಾರಿ ರಸ್ತೆ ನಿರ್ಮಾಣ ನೆಪದಲ್ಲಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಸುಮಾರು 5 ಲಕ್ಷ ರೂ. ಮುಂಗಡ ಹಣ, ತಿಂಗಳಿಗೆ 3 ಸಾವಿರ ರೂ. ಬಾಡಿಗೆ ನೀಡಿ ವ್ಯಾಪಾರ ನಡೆಸುತ್ತಿದ್ದೇವೆ. ಇಂತಹ ಸಮಸ್ಯೆಯಿಂದ ಬೀದಿಗೆ ಬರುವ ಪರಿಸ್ಥಿತಿ ಇದೆ. ರಾತ್ರಿ ಕಾಮಗಾರಿಗಳನ್ನು ನಡೆಸಿ, ಬೆಳಗ್ಗೆ ವ್ಯಾಪಾರಕ್ಕೆ ಅನುಕೂಲ ಮಾಡಿ ಕೊಟ್ಟಿದ್ದರೆ ಒಳ್ಳೆಯದಿತ್ತು. > ಮಂಜುನಾಥ್, ಮೈ ಕಾರ್ ವಾಶ್ ಮಾಲೀಕ ನಾವು ಟೈಲ್ಸ್ ವ್ಯಾಪಾರ ನಡೆಸುತ್ತಿದ್ದೇವೆ. ನಮ್ಮ ಅಂಗಡಿಗೆ ಬೇರೆಬೇರೆ ಕಡೆಗಳಿಂದ ದೊಡ್ಡ ಲಾರಿಗಳಲ್ಲಿ ಟೈಲ್ಸ್ಗಳನ್ನು ತರಬೇಕಾಗುತ್ತದೆ. ಕಾಮಗಾರಿ ನಡೆಯುತ್ತಿರುವುದರಿಂದ ದೊಡ್ಡ ಸಮಸ್ಯೆಯಾಗಿದೆ. ವ್ಯಾಪಾರ ಕಡಿಮೆಯಾದ್ದರಿಂದ ಅಂಗಡಿಯ ಬಾಡಿಗೆ ಕಟ್ಟಲು ಕಷ್ಟವಾಗಿದೆ. ಆದಷ್ಟು ಶ್ರೀ ಕಾಮಗಾರಿಗಳನ್ನು ಪೂರ್ತಿಗೊಳಿಸಿ, ವ್ಯವಹಾರ ಮಾಡಲು ಅನುಕೂಲ ಮಾಡಿಕೊಡಬೇಕು. > ಜಿತೇಂದ್ರ, ಬೋರಾ ಕ್ಲಾಸಿಕ್ ಟೈಲ್ಸ್ ಮಾಲೀಕ ಈ ರಸ್ತೆಯಲ್ಲಿ ಸಂಚಾರ ಸಿಕ್ಕಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಷ್ಟು ಮಾತ್ರವಲ್ಲದೆ, ಇತ್ತೀಚೆಗೆ ವಾಹನಗಳ ಮಧ್ಯೆ ರ್ಷಣೆ ಉಂಟಾಗಿ ಜಗಳವಾಡುವ ಟನೆಗಳು ಹೆಚ್ಚ್ಚಾಗುತ್ತಿದೆ. ಇದರಿಂದ ಮತ್ತೆ ವಾಹನ ದಟ್ಟಣೆಯಾಗುತ್ತದೆ. ಕಾಮಗಾರಿ ನಡೆಯುತ್ತಿರುವುದರಿಂದ ಧೂಳು ಅಧಿಕವಾಗಿದ್ದು, ಉಸಿರಾಡಲು ಕಷ್ಟವಾಗುತ್ತಿದೆ. ಕಲುಷಿತ ಗಾಳಿ, ವಾಹನಗಳ ಹಾರ್ನ್ ಶಬ್ದ ಹೀಗೆ ನಿತ್ಯವೂ ಕಿರಿಕಿರಿ ವಾತಾವರಣ ನಿರ್ಮಾಣವಾಗಿದೆ. > ಯಶಸ್, ಗಣೇಶ್ ್ಯಾಬ್ರಿಕೇಟರ್ಸ್ ಮಾಲೀಕ