ಜಿಲ್ಲೆ

ಎಲ್ಲಿದೆ ಸುವ್ಯವಸ್ಥಿತ ಫುಟ್​ಪಾತ್​?

ತುಮಕೂರು ಡೆಸ್ಕ್

ಪಾಲನೆಯಾಗಿಲ್ಲ ಐಆರ್​ಸಿ ಮಾರ್ಗಸೂಚಿ | ಅಂಗಡಿ, ಸ್ಥಳಿಯ ನಿವಾಸಿಗಳಿಂದ ಅತಿಕ್ರಮಣ

ವಿಜಯವಾಣಿ ಸುದ್ದಿಜಾಲ ತುಮಕೂರು
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಕೆಲವು ವಾರ್ಡ್​ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆಯಾದರೂ ಸುವ್ಯವಸ್ಥಿತ ಫುಟ್​ಪಾತ್​ ಮಾತ್ರ ಸ್ಮಾರ್ಟ್​ಸಿಟಿಯಲ್ಲಿ ಎಲ್ಲೂ ಕಾಣಿಸುತ್ತಿಲ್ಲ.
ಫುಟ್​ಪಾತ್​ ಸ್ಥಿತಿಗತಿಗಳ ಕುರಿತು ತುಮಕೂರಿನ ಸಾರಂಗ ಎಕಾಲಜಿ ಕನ್ಸರ್ವೇಷನ್​ ಸರ್ಕಾರೇತರ ಸಂಸ್ಥೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ತುಮಕೂರಲ್ಲಿ ಪ್ರಾಯೋಗಿಕವಾಗಿ ನಡೆಸಿದ ಸಮೀಕ್ಷೆಯೇ ಆತಂಕ ಮೂಡಿಸುವಂತಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ುಟ್​ಪಾತ್​ಗಳಲ್ಲಿ ಐಆರ್​ಸಿ ಮಾರ್ಗಸೂಚಿ ಪಾಲಿಸಿಲ್ಲ ಎಂಬ ಬಗ್ಗೆ ಚಿತ್ರಸಹಿತ ಸಮೀಕ್ಷಾ ವರದಿ ನೀಡಿದೆ.


ಸ್ಮಾರ್ಟ್​ಸಿಟಿ ಲಿ., ವತಿಯಿಂದ ನಿರ್ಮಿಸಲಾಗಿರುವ ಫುಟ್​ಪಾತ್​ನಲ್ಲಿ ಕಾಂಕ್ರೀಟ್​ ಹಾಳಾಗಿದೆ, ಅಳವಡಿಸಿರುವ ಟೈಲ್ಸ್​ಗಳು ಮುರಿದು ಚೆಲ್ಲಾಪಿಲ್ಲಿಯಾಗಿವೆ. ಕೆಲವೆಡೆ ಟೈಲ್ಸ್​ಗಳೇ ಮಾಯವಾಗಿದ್ದು, ಓಡಾಟಕ್ಕೂ ತೊಂದರೆಯಾಗಿದೆ. ಸುಸೂತ್ರ ಫುಟ್​ಪಾತ್​ ಕನೆಕ್ಟಿವಿಟಿ ಎಲ್ಲಿಯೂ ಇಲ್ಲ. ಅಂಗಡಿ, ಮಳಿಗೆಗಳು, ಸ್ಥಳಿಯ ನಿವಾಸಿಗಳು ಫುಟ್​ಪಾತ್​ ಆಕ್ರಮಿಸಿಕೊಂಡಿದ್ದಾರೆ.
ನಗರಗಳಲ್ಲಿ ಫುಟ್​ಪಾತ್​ ಬಗ್ಗೆ ಭಾರತ ಸರ್ಕಾರ ಇಂಡಿಯನ್​ ರೋಡ್​ ಕಾಂಗ್ರೆಸ್​ (ಐಆರ್​ಸಿ)
ಮಾರ್ಗಸೂಚಿ ರೂಪಿಸಿದ್ದು, ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ಇದನ್ನು ಪರಿಗಣಿಸಿಯೇ ಇಲ್ಲ. ಟೆಂಡರ್​ ಕರೆದು ಗುತ್ತಿಗೆ ನೀಡುವುದು, ತೇಪೆ ಹಚ್ಚುವ ಕೆಲಸ ಮಾಡಿ "ಇದು ಸ್ಮಾರ್ಟ್​ ಸಿಟಿ' ಎಂದು ಪೋಟೋ ಹಾಕಿಕೊಳ್ಳುವುದೇ ಕಾಯಕವಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಆಗಿಂದಾಗ್ಗೆ ಬಿಸಿಮುಟ್ಟಿಸುವ ತುಮಕೂರು ನಗರ ಪಾಲಿಕೆ ನಂತರ ಸುಮ್ಮನಾಗುವುದು ರಹಸ್ಯವಾಗಿದೆ. ಅಂಗಡಿ&ಮುಂಗಟ್ಟುಗಳು, ಟೀ&ಕಾಫಿ ಅಡ್ಡಗಳು ಫುಟ್​ಪಾತ್​, ಸರ್ವೀಸ್​ ರಸ್ತೆಗಳನ್ನು ಅತಿಕ್ರಮಿಸಿದ್ದರೂ ಆ ಕಡೆ ಗಮನವನ್ನೇ ಕೊಡುತ್ತಿಲ್ಲ. ಟ್ರಾನ್ಸ್​ಾರ್ಮರ್​, ನಾಮಲಕಗಳು ಫುಟ್​ಪಾತ್​ಗೆ ಅಡ್ಡಲಾಗಿದ್ದರೂ ಅದನ್ನು ಸ್ಥಳಾಂತರ ಮಾಡುವ ಪುರಸೊತ್ತೂ ಪಾಲಿಕೆಗೆ ಇಲ್ಲ. ಎಲ್ಲಿ ಜಾಗ ಇದೆಯೋ ಅಲ್ಲಿ ಫುಟ್​ಪಾತ್​ ನಿರ್ಮಾಣ ಮಾಡಿರುವುದು ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ.

ಮಾರ್ಗಸೂಚಿ ಏನು?
ಪಾದಚಾರಿ ರಸ್ತೆ ಅಗಲ ಐಆರ್​ಸಿ ನಿಯಮದ ಪ್ರಕಾರ ಕನಿಷ್ಠ 6 ಅಡಿ ಇರಬೇಕು. ಆದರೆ, ತುಮಕೂರಿನ ಬಹುತೇಕ ಕಡೆಗಳಲ್ಲಿ 2 ಮತ್ತು 2.5 ಅಡಿ ಅಗಲದಲ್ಲಿ ಫುಟ್​ಪಾತ್​ ನಿರ್ಮಿಸಲಾಗಿದೆ. ನಿರಂತರ ಸಂಪರ್ಕ ಇರಬೇಕು. ಎಲ್ಲೂ ಸಂಪರ್ಕ ಕಡಿತವಾಗಿರಬಾರದು. ಅಡ್ಡ ರಸ್ತೆಗಳು ಬಂದಾಗ ುಟ್​ಪಾತ್​ನ ಎತ್ತರ ಕಡಿಮೆಯಾಗದಂತೆ ಸಮಮಟ್ಟದಲ್ಲಿ ಏರಿಸಬೇಕು. ರಸ್ತೆ ಮಟ್ಟಕ್ಕೇರಿಸಿ, ನಿರಂತರತೆ ಮುಂದುವರಿಸಿ ಎಡ, ಬಲದಲ್ಲಿ ಇಳಿಜಾರು ಮಾಡಬೇಕಿದೆ. ವ್ಯಾಪಾರ ವಲಯಗಳಲ್ಲಿ ಫುಟ್​ಪಾತ್​ ಅಗಲ ಮಾಡಿರಬೇಕು. ಎಲ್ಲ ಕಡೆ ವೀಲ್​ಚೇರ್​ನ ಚಕ್ರ ಹತ್ತುವಂತೆ, ಸಂಚರಿಸುವಂತೆ ರ್ಯಾಂಪ್​ ವ್ಯವಸ್ಥೆ ಇರಬೇಕು. ಸೈಕಲ್​ ಪಾತ್​ಗಳು ಸೈಕಲ್​ ಸವಾರರಿಗೆ ಅನುಕೂಲ ವಾಗಿರಬೇಕು. ಆದರೆ, ಬಹುತೇಕ ಕಡೆಗಳಲ್ಲಿ ಸೈಕಲ್​ ಪಾತ್​ಗಳು ಬೈಕ್​ಗಳ ಪಾರ್ಕಿಂಗ್​ ಸ್ಪಾಟ್​ಗಳಾಗಿವೆ.

ಪೊಲೀಸ್​ ಇಲಾಖೆ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಶೇ.40ರಷ್ಟು ಪಾದಚಾರಿಗಳಿಗೆ ಸಾವು, ನೋವಿಗೆ ಈಡಾಗುತ್ತಿದ್ದಾರೆ. ರಸ್ತೆ, ಫುಟ್​ಪಾತ್​ ವೈಜ್ಞಾನಿಕವಾಗಿ ನಿರ್ಮಾಣಮಾಡದ ಕಾರಣದಿಂದ ಇಂತಹ ಅವಡಕ್ಕೆ ಕಾರಣವಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಮಾಡುವಾಗ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆಯಾಗಬೇಕು.| ಎಸ್​.ಪ್ರಮೋದ್​ ನಿರ್ದೇಶಕ, ಸಾರಂಗ ಎಕಾಲಜಿ ಕನ್ಸರ್ವೇಷನ್​ ತುಮಕೂರು ಹೆಸರಿಗೆ ಮಾತ್ರ ಸ್ಮಾರ್ಟ್​ ಸಿಟಿ ಎನ್ನಿಸಿಕೊಂಡಿದ್ದು, ಫುಟ್​ಪಾತ್​ ಕಾಮಗಾರಿ ಅವೈಜ್ಞಾನಿಕ ಎನ್ನಿಸಿದೆ. ಬಿ.ಎಚ್​.ರಸ್ತೆ ಸೇರಿದಂತೆ ಯಾವೊಂದು ರಸ್ತೆಯಲ್ಲಿಯೂ ಫುಟ್​ಪಾತ್​ ಸರಿಯಾಗಿಲ್ಲ. ರಸ್ತೆ ಇರುವಂತೆ ಜಾಗ ಇರುವ ಕಡೆಗಳಲ್ಲಿ ಫುಟ್​ಪಾತ್​ ನಿರ್ಮಿಸಲಾಗಿದೆ ಹೊರತು ನೇರವಾಗಿ ಎಲ್ಲಿಯೂ ಇಲ್ಲ. ನಿರ್ಮಿಸಿರುವ ಫುಟ್​ಪಾತ್​ಗಳಲ್ಲಿ ಅಂಗಡಿಗಳು ವ್ಯಾಪಾರವಿಟ್ಟುಕೊಂಡಿದ್ದರೂ ಸ್ಥಳಿಯ ಆಡಳಿತ ಕಣ್ಮುಚ್ಚಿ ಕೊಳಿತಿದೆ.| ವರುಣ್​ ಚಕ್ರವರ್ತಿ ಸ್ಥಳಿಯ ನಿವಾಸಿ