*ರಾಮನಗರದ ವಾರ್ಡ್ ನಂ 27ರಲ್ಲಿ ಅದ್ವಾನಗೊಂಡ ಮಾರ್ಗಗಳು
* ಮಳೆಯಲ್ಲಿ ಕೆಸರು, ಬೇಸಿಗೆಯಲ್ಲಿ ‘ಧೂಳಿನ ಮಜ್ಜನ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಬೆಂಗಳೂರು- ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ನಗರದ ಪ್ರಮುಖ ವಾರ್ಡ್‌ಗಳ ಪೈಕಿ ಒಂದಾಗಿರುವ 27ನೇ ವಾರ್ಡ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ವಾರ್ಡಿನ ಬೀದಿಗಳು ಪ್ರಮುಖವಾಗಿ ರಸ್ತೆ ಸಮಸ್ಯೆ ಎದುರಿಸುತ್ತಿವೆ.
ರಾಮನಗರದ ನಗರಸಭೆ ಇತರ ವಾರ್ಡ್‌ಗಳಿಗೆ ಹೋಲಿಸಿಕೊಂಡರೆ 27ನೇ ವಾರ್ಡ್ ಪ್ರಮುಖ ವಸತಿ ಸಮುಚ್ಚಯ, ಪ್ರಮುಖ ಬಡಾವಣೆಗಳಿರುವ ಪ್ರದೇಶವಾಗಿದೆ. ಬೆಂಗಳೂರು- ಮೈಸೂರು ರಸ್ತೆಗೆ ಹೊಂದಿಕೊಂಡಂತೆ ವಿವೇಕಾನಂದ ಪುತ್ಥಳಿ ನಿರ್ಮಾಣ ಮಾಡಿರುವುದು ವಾರ್ಡಿನ ಕೀರ್ತಿ ಹೆಚ್ಚಿಸಿದೆ.
ರಾಜಕೀಯ ಗಣ್ಯರ ಜತೆಗೆ ಹೆಚ್ಚಾಗಿ ಶಿಕ್ಷಣ ಇಲಾಖೆ ಮತ್ತಿತರ ಸರ್ಕಾರಿ ಉದ್ಯೋಗಿಗಳ ವಸತಿ ಪ್ರದೇಶವಾಗಿದೆ. ವ್ಯಾಪಾರ ವಾಣಿಜ್ಯ ಕೇಂದ್ರಗಳು, ಪ್ರಮುಖ ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ಪ್ರಮುಖ ವಿದ್ಯಾಸಂಸ್ಥೆಗಳನ್ನು ಹೊಂದಿದೆ.
ವಾರ್ಡಿನಲ್ಲಿ ಸುಮಾರು 8 ರಿಂದ 9 ಸಾವಿರ ಜನಸಂಖ್ಯೆ ಇದ್ದು, 3 ಸಾವಿರ ಮತದಾರರಿದ್ದಾರೆ. ಕುಡಿಯುವ ನೀರಿನ ಸಂಪರ್ಕ ಇತರ ಅಭಿವೃದ್ಧಿ ಕೆಲಸಗಳಿಗೆ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಮಳೆ ಬಂದ ಸಂದರ್ಭದಲ್ಲಿ ಕೆಸರುಮಯವಾಗುತ್ತವೆ. ಬಿಸಿಲಿನಲ್ಲಿ ‘ಧೂಳುಮಯವಾಗುತ್ತವೆ. ಡಾಂಬರು, ಸಿಮೆಂಟ್ ಕಿತ್ತು ಮಣ್ಣಿನ ರಸ್ತೆಗಳಾಗಿವೆ.
ವಾರ್ಡ್ ಬೆಂಗಳೂರು- ಮೈಸೂರು ರಸ್ತೆಯಿಂದ ರಾಯರದೊಡ್ಡಿವರೆಗೆ ಇದ್ದು, ವಿವೇಕಾನಂದನಗರ, ಟೀಚರ್ಸ್ ಕಾಲನಿ, ಶಾಂತಿಲಾಲ್ ಲೇಔಟ್, ‘ಭುವನೇಶ್ವರಿನಗರದವರೆಗೆ ವಿಸ್ತಾರ ಹೊಂದಿದೆ.
ಪ್ರತಿ ಬಡಾವಣೆ ಬೀದಿಯಲ್ಲಿ ಯುಜಿಡಿ ಸಂಪರ್ಕ ಕಾಮಗಾರಿ ನಡೆಸಲಾಗುತ್ತಿದ್ದು, ಶೇ.90 ಕಾಮಗಾರಿ ಮುಗಿದಿದೆ. ಶೇ.10 ಕೆಲಸ ಆಗಬೇಕಿದೆ. ರಸ್ತೆಗಳ ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ವಾರ್ಡಿನಲ್ಲಿ ಯಾವ ಸಮಸ್ಯೆ ಇಲ್ಲ ಎನ್ನುತ್ತಾರೆ ವಾರ್ಡಿನ ನಗರಸಭಾ ಸದಸ್ಯರು.
ವಾರ್ಡಿನಲ್ಲಿ ಸುಮಾರು 4 ಕಡೆಗಳಲ್ಲಿ ಉದ್ಯಾನವನಕ್ಕೆ ಜಾಗವಿದೆ. ಒಂದು ಉದ್ಯಾನವನ ಮಾತ್ರ ಅಭಿವೃದ್ಧಿ ಆಗಿದೆ. ನಾಲ್ಕು ಜಾಗಗಳಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಾಣ ಮಾಡಿ ನಗರಸಭೆ ವಾಯುವಿಹಾರಕ್ಕೆ ಸುಸಜ್ಜಿತ ವಾಕಿಂಗ್ ಟ್ರಾಕ್, ಮಕ್ಕಳಿಗೆ ಆಟದ ವ್ಯವಸ್ಥೆಗೆ ಪರಿಕರ ಅಳವಡಿಸಬೇಕಿದೆ.
ಜಿಲ್ಲಾ ಯುವಜನ ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿರುವ ಜಿಲ್ಲಾ ಈಜುಕೊಳ ಕೇಂದ್ರ ಇದೇ ವಾರ್ಡಿನಲ್ಲಿದ್ದು, ನಿರ್ವಹಣೆ ಇಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಜುಪಟುಗಳಿಗೆ ದೂರವಾಗಿದೆ. ಶಾಸಕ ಇಕ್ಬಾಲ್ ಹುಸೇನ್ ಈಜುಕೊಳಕ್ಕೆ ಕಾಯಕಲ್ಪ ನೀಡಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಆಶಾದಾಯಕವಾಗಿದೆ.
ಆಗಬೇಕಿರುವ ಕೆಲಸಗಳುವಿವೇಕಾನಂದನಗರ, ಟೀಚರ್ಸ್ ಕಾಲನಿ, ಶಾಂತಿಲಾಲ್ ಲೇಔಟ್, ‘ಭುವನೇಶ್ವರಿನಗರ ಮತ್ತಿತರ ಬೀದಿ ರಸ್ತೆಗಳ ಡಾಂಬರೀಕರಣ ಮತ್ತು ಸಿಮೆಂಟ್ ರಸ್ತೆಗಳು ಆಗಬೇಕಿದೆ.
ಮೊ : 9880055187
ವಾರ್ಡಿನಲ್ಲಿ ಸುಮಾರು 8 ರಿಂದ 9 ಸಾವಿರ ಜನಸಂಖ್ಯೆ
===