ಜಿಲ್ಲೆ

ಕಾಲ ಕೂಡಿ ಬಂದರೆ ಸಚಿವ

ವೀರೇಶ ಸೌದ್ರಿ

ಧಾರವಾಡ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸದ್ಯಕ್ಕೆ ಏನೂ ಮಾತನಾಡದಂತೆ ಎಲ್ಲ ಶಾಸಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಅದೇ ರೀತಿ ನಾವೂ ಕೂಡ ಸಿಎಂ ಹಾಗೂ ಡಿಸಿಎಂ ಸೂಚನೆ ಪಾಲಿಸುತ್ತೇವೆ. ಕಾಲ ಕೂಡಿ ಬರಲಿ ನಾನೂ ಸಚಿವನಾಗುತ್ತೇನೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುತ್ತೇವೆ ಎಂದರೆ ಯಾರೂ ಬೇಡ ಅನ್ನುವುದಿಲ್ಲ. ನಾನು ಸಚಿವನಾದರೆ ಕೆಲಸ ಮಾಡಿಸಿ ತೋರಿಸುತ್ತೇನೆ. ಸದ್ಯಕ್ಕೆ ಆ ವಿಷಯ ಬೇರೆ. ಈಗಂತೂ ಸಿಎಂ ಹಾಗೂ ಡಿಸಿಎಂ ನಿರ್ದೇಶನ ಏನಿದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದರು.

ದಲಿತ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಅವರೇ ಈ ಮೊದಲು ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದಿದ್ದಾರೆ ಎಂದರು.